ಮೂಡಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಬನ್ನಡ್ಕ ಇದರ ವತಿಯಿಂದ ಪ್ರಥಮ ವರ್ಷದ ಸಾರ್ವಜನಿಕ ಬನ್ನಡ್ಕ ಶಾರದೋತ್ಸವವು ಬನ್ನಡ್ಕ ದೇವಸ್ಥಾನದ ಕಲಾಮಂದಿರದಲ್ಲಿ ಅಕ್ಟೋಬರ್ 4 ರಂದು ಮಂಗಳವಾರ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಗೌರವಧ್ಯಕ್ಷರಾಗಿ ಉಮನಾಥ್ ಎ. ಕೋಟ್ಯಾನ್, ಗೌರವ ಸಲಹೆಗಾರರಾಗಿ ಸುಕುಮಾರ್ ಬಲ್ಲಾಳ್, ಅಧ್ಯಕ್ಷತೆ ಎಂ. ದಯಾನಂದ ಪೈ, ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡು ಹಾಗೂ ಸಮಿತಿಯ ಉಪಾಧ್ಯಕ್ಷರು, ಕೋಶಾಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿರಲಿದ್ದಾರೆ. ಧಾರ್ಮಿಕಾ ಸಭಾ ಕಾರ್ಯಕ್ರಮದಲ್ಲಿ ಕು. ಅಕ್ಷಯಾ ಗೋಖಲೆ ಉಪನ್ಯಾಸಕರು ಕಾರ್ಕಳ ಇವರು ದಿಕ್ಸೂಚಿ ಭಾಷಣ ನೀಡಲಿದ್ದಾರೆ.
ವಿಶೇಷ ಆಕರ್ಷಣೆ: ಮಧ್ಯಾಹ್ನ 2.30ರಿಂದ 4.00ರವರೆಗೆ ಮಕ್ಕಳಿಗೆ ಮುದ್ದು ಶಾರದೆ ಹಾಗೂ ಭಕ್ತಿಗೀತೆ ಸ್ಪರ್ಧೆ ನಡೆಯಲಿದೆ. ಸಂಜೆ 8 ಗಂಟೆಗೆ ವೈಭವದ ಶೋಭಾಯಾತ್ರೆಯಲ್ಲಿ ಶ್ರೀ ದೇವಿಯ ವಿಗ್ರಹವನ್ನು ಬನ್ನಡ್ಕದಿಂದ ಹೊರಟು ಅಲಂಗಾರು ಮಾರ್ಗವಾಗಿ ಒಂಟಿಕಟ್ಟೆ ಕಡಲಕೆರೆಯಲ್ಲಿ ಜಲಸ್ತಂಬನಗೊಳಿಸಲಾಗುವುದು.
ಕಾರ್ಯಕ್ರಮದ ವಿವರ
ಬೆಳ್ಳಿಗ್ಗೆ ಗಂಟೆ 7.30 ಕ್ಕೆ : ಗಣಹೋಮ
ಬೆಳ್ಳಿಗ್ಗೆ ಗಂಟೆ 8.00 ಕ್ಕೆ : ಒಂಟಿಕಟ್ಟೆಯಿಂದ ಮೂಡಬಿದಿರೆ ಮಾರ್ಗವಾಗಿ ಬನ್ನಡ್ಕಕ್ಕೆ ಮೆರವಣಿಗೆಯ ಮೂಲಕ ಶ್ರೀ ಶಾರಾದಾ ಮಾತೆಯನ್ನು ಬರಮಾಡಿಕೊಳ್ಳುವುದು
ಬೆಳ್ಳಿಗ್ಗೆ ಗಂಟೆ 9.30 ಕ್ಕೆ : ಶ್ರೀ ಶಾರದಾಂಬೆಯ ಪ್ರತಿಷ್ಠಾಪನೆ
ಬೆಳ್ಳಿಗ್ಗೆ ಗಂಟೆ 11ರಿಂದ 12ರವರೆಗೆ : ದುರ್ಗಾಹೋಮ
ಮಧ್ಯಾಹ್ನ 12 ರಿಂದ 12.30ರವರೆಗೆ : ಭಜನೆ
ಮಧ್ಯಾಹ್ನ 12.30ಕ್ಕೆ : ಮಹಾಪೂಜೆ
ಮಧ್ಯಾಹ್ನ 1.00 ಕ್ಕೆ :ಮಹಾ ಅನ್ನಸಂತರ್ಪಣೆ
ಸಂಜೆ: ಮಹಾಪೂಜೆ ಮತ್ತು ವಿಸರ್ಜನಾ ಪೂಜೆ
0 Comments