ದೇವರ ಕೋಲು ಮುಟ್ಟಿ ಹಲ್ಲೆಗೊಳಗಾದ ದಲಿತ ಬಾಲಕನ ಮನೆಗೆ ಸಚಿವರ ಭೇಟಿ:ನೊಂದ ಕುಟುಂಬಕ್ಕೆ ಬಂಪರ್ ಗಿಫ್ಟ್ ನೀಡಿದ ಕೋಟ

ಜಾಹೀರಾತು/Advertisment
ಜಾಹೀರಾತು/Advertisment

ಇತ್ತೀಚೆಗೆ ಕೋಲಾರದಲ್ಲಿ 14 ವರ್ಷದ ಬಾಲಕನೋರ್ವ ಕೆಳಗೆ ಬಿದ್ದ ದೇವರ ಕೋಲು ಮುಟ್ಟಿದ್ದಕ್ಕೆ ಹಲ್ಲೆ ಹಾಗೂ ಆತನ ದಂಡ ವಿಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಮಗುವಿನ ಕುಟುಂಬವನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ನೊಂದ ಕುಟುಂಬಕ್ಕೆ ಸಾಂತ್ವನ ತಿಳಿಸಿದ ಸಚಿವರು ಇಲಾಖೆಯ ವತಿಯಿಂದ ಕುಟುಂಬಕ್ಕೆ ಒದಗಿಸಲಾಗುವ ಸವಲತ್ತುಗಳ ಆದೇಶ ಪ್ರತಿಯನ್ನು ನೀಡಿದರು.


ದೌರ್ಜನ್ಯಕ್ಕೆ ಒಳಗಾದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಉಳ್ಳೇರಹಳ್ಳಿಯ ಕು.ಚೇತನ್ ತಂದೆ ರಮೇಶ್ ಈ ಮಗುವಿಗೆ "ಪದವಿಪೂರ್ವ ಶಿಕ್ಷಣದಿಂದ ಸ್ನಾತಕೋತ್ತರವರೆಗೆ ಉಚಿತ ಶಿಕ್ಷಣಕ್ಕೆ ಅರ್ಹರಾಗಿರುವ ಪ್ರಮಾಣ ಪತ್ರ "(Free Education Entitlement Certificate from Primary to Post Graduation) ನೀಡಲು ವಿಶೇಷ ಪ್ರಕರಣದಲ್ಲಿ ಪರಿಗಣಿಸಿ ಆಯುಕ್ತರು ಸಮಾಜ ಕಲ್ಯಾಣ ಇಲಾಖೆ ಇವರಿಗೆ ಮಂಜೂರಾತಿ ನೀಡಿ ಆದೇಶಿಸಿದರು.

ಹಾಗೂ ಈ ಕುಟುಂಬಕ್ಕೆ ಪುನರ್ವಸತಿ ಯೋಜನೆಯಡಿಯಲ್ಲಿ ಡಾ||ಬಿ. ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ರೂಪಾಯಿ 5.00 ಲಕ್ಷಗಳ(ರೂಪಾಯಿ 5 ಲಕ್ಷಗಳು ಮಾತ್ರ ) ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲು ಸಚಿವರು ಆದೇಶಿಸಿದ್ದಾರೆ.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮುನಿರತ್ನ, ಸಂಸದರಾದ ಶ್ರೀ ಮುನಿಸ್ವಾಮಿ, ಮಾಜಿ ಸಚಿವರಾದ ಶ್ರೀ ವರ್ತೂರು ಪ್ರಕಾಶ್, ಶ್ರೀ ಪ್ರಮೋದ್ ಮಧ್ವರಾಜ್ ಸಹಿತ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

 

Post a Comment

0 Comments