ಮೂಡುಬಿದಿರೆ: ದ.ಕ.ಜಿ.ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಹಾಗೂ ಮುಕ್ತಿ ಪ್ರಕಾಶನ ಪ್ರೌಢಶಾಲೆ ನೀರುಡೆ ಇವುಗಳ ಸಹಯೋಗದಲ್ಲಿ 2022-23ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟವು ಶುಕ್ರವಾರ ನೀರುಡೆ ಮುಕ್ತಿ ಪ್ರಕಾಶನ ಪ್ರೌಢಶಾಲೆಯ ಕ್ರೀಂಡಾಗಣದಲ್ಲಿ ನಡೆಯಿತು.ಶಾಲೆಯ ಸಂಚಾಲಕ ಫಾದರ್ ಆಲ್ಬನ್ ರೊಡ್ರಿಗಸ್ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆಟ-ಊಟ-ಪಾಠದಂತೆ ಪ್ರತಿಯೊಬ್ಬರಿಗೂ ಕ್ರೀಡೆ ಅಗತ್ಯ.ಕೊರೋನಾದಿಂದ 2 ವರ್ಷಗಳ ಕಾಲ ಮೊಬೈಲ್ ಸೆಲ್ ನಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಉತ್ತಮ ಸ್ಪರ್ಧಾ ಭಾವನೆಯೊಂದಿಗೆ ಆಟವಾಡಿ ಎಂದು ಶುಭ ಹಾರೈಸಿದರು.
ಮೂಡುಬಿದಿರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಫಲಕಗಳನ್ನು ಅನಾವರಣಗೊಳಿಸಿ ಮಾತನಾಡಿ ಕ್ರೀಡಾಪಟುಗಳು ಕ್ರೀಡೆಯ ನಿಯಮಗಳನ್ನು ಪಾಲಿಸಿ ಕ್ರೀಡಾಸ್ಫೂರ್ತಿಯೊಂದಿಗೆ ಆಟ ಆಡಬೇಕು. ಗೆಲ್ಲುವ ಛಲ ನಿಮ್ಮಲ್ಲಿರಲಿ ಆದರೆ ಇನ್ನೊಬ್ಬ ಕ್ರೀಡಾಪಟುವಿಗೆ ತೊಂದರೆಯಾಗದಿರಲಿ ಎಂದು ಕಿವಿ ಮಾತನ್ನು ಹೇಳಿದರು.
ಕಲ್ಲಮುಂಡ್ಕೂರು ಗ್ರಾ.ಪಂ.ಸದಸ್ಯೆ ಲವೀನಾ, ಎಕ್ಕಾರು ಗ್ರಾ.ಪಂ.ಅಧ್ಯಕ್ಷೆ ಸುರೇಖಾ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ವಲಯದ ಮಾಜಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ರಾಜಶ್ರೀ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ವಲಯದ ಶಿಕ್ಷಣ ಸಂಯೋಜಕ ರಾಜೇಶ್ ಭಟ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಎಸ್ ., ದೈಹಿಕ ಶಿಕ್ಷಕರ ಸಂಘದ ವಲಯಾಧ್ಯಕ್ಷ ಸುನೀಲ್ ಮಿರಾಂದ, ಜಿಲ್ಲಾ ಗೈಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೋಶಾಧಿಕಾರಿ ಶಿವಾನಂದ ಕಾಯ್ಕಿಣಿ, ಶಾಲಾ ಆಡಳಿತ ಮಂಡಳಿಯ ಸದಸ್ಯ ಫೆಲಿಕ್ಸ್ ಪಿಂಟೋ, ಮುಚ್ಚೂರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಾಜರಸ್ ಡಿಕೋಸ್ತ, ಮುಚ್ಚೂರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಸ್ಟ್ಯಾನಿ ಮಿರಾಂದ, ಪಂದ್ಯಾಟದ ಪೋಷಕ ರಾಯನ್ ರೋಷನ್ ಡಿ'ಸೋಜಾ, ಸೈಂಟ್ ಪ್ರಾನ್ಸಿಸ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಫ್ಲೋಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಫೆಲಿಕ್ಸ್ ಪಿಂಟೋ ಸ್ವಾಗತಿಸಿದರು. ದ.ಕ.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕ ಮುರಳಿದಾಸ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕ್ಲೆಮೆಂಟ್ ಡಿ'ಸೋಜ ವಂದಿಸಿದರು.
0 Comments