ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ವಾಲಿಬಾಲ್ ಪಂದ್ಯಾಟ ಆಳ್ವಾಸ್ ಬಾಲಕರಿಗೆ ಪ್ರಶಸ್ತಿ

 


ಮೂಡಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಮತ್ತು ನಾರಾಯಣ ಗುರು ಪದವಿಪೂರ್ವ ಕಾಲೇಜು, ಕುದ್ರೋಳಿಯ ಆಶ್ರಯದಲ್ಲಿ  ಮಂಗಳಾ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಬಂಟ್ವಾಳವನ್ನು ಪ್ರತಿನಿಧಿಸಿದ ಕಾರ್ಮೆಲ್ ಪ.ಪೂ. ಕಾಲೇಜನ್ನು 2-0 ಅಂಕಗಳಿಂದ ಸೋಲಿಸಿ, ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ ಎಸ್.ಡಿ.ಎಂ. ಪ.ಪೂ ಕಾಲೇಜು ತಂಡವು ಮಂಗಳೂರನ್ನು ಪ್ರತಿನಿಧಿಸಿದ ನಾರಾಯಣ ಗುರು ಪ.ಪೂ. ಕಾಲೇಜು ತಂಡವನ್ನು 2-1ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಅಂತಿಮ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಎಸ್.ಡಿ.ಎಂ ಕಾಲೇಜು ತಂಡವನ್ನು 2-1 ಅಂಕಗಳಿಂದ ಮಣಿಸಿ ಪ್ರಶಸ್ತಿಯನ್ನು ಪಡೆಯಿತು.

ಆಳ್ವಾಸ್ ತಂಡದ ರಾಹುಲ್ ಉತ್ತಮ ಹೊಡೆತಗಾರ, ಪುನೀತ್ ಉತ್ತಮ ಪಾಸರ್ ಪ್ರಶಸ್ತಿಯನ್ನು ಪಡೆದರು.

Post a Comment

0 Comments

Advertisement