ಮುಲ್ಕಿ: ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಪತ್ತೆ : ಪೊಲೀಸರಿಗೊಪ್ಪಿಸಿದ ಸ್ಥಳೀಯ ಯುವಕರು

 

ಮುಲ್ಕಿ:ಅನ್ಯ ಕೋಮಿನ ಯುವಕನ ಜೊತೆ ಯುವತಿ ಪತ್ತೆಯಾಗಿದ್ದು, ಸ್ಥಳೀಯ ಯುವಕರು ಕಾರ್ಯಾಚರಣೆ ನಡೆಸಿ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಸ್ ರಾವ್ ನಗರ ಪೊಲೀಸ್ ಕ್ವಾರ್ಟಸ್್ರ ಬಳಿ ನಡೆದಿದೆ.

ಉಡುಪಿಯ ಕಟಪಾಡಿಯಲ್ಲಿ ವಾಸ್ತವ್ಯವಿರುವ ಉತ್ತರ ಪ್ರದೇಶ ಮೂಲದ ಯುವಕ ಫಯಿಮ್ ಎಂಬಾತ ಕಟಪಾಡಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸಕ್ಕಿದ್ದು ತನ್ನ ಮಿತ್ರ ಗುಲ್ಫಾಮ್ ಎಂಬವರ ರೂಮ್‌ಗೆ ಬಂದಿದ್ದ.

ಆ ಸಂದರ್ಭ ಕೊಲಕಾಡಿ ಮೂಲದ ಯುವತಿ ಜೊತೆ ಮಾತನಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸ್ಥಳೀಯರಿಗೆ ಸಂಶಯ ಬಂದು ವಿಚಾರಿಸಿದ್ದು, ಕೂಡಲೇ ಯುವತಿ ಸ್ಥಳದಿಂದ ಪರಾರಿಯಾಗಿದ್ದಾಳೆ.

ಈ ಸಂದರ್ಭ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದ್ದು ಸ್ಥಳೀಯರು ಆರೋಪಿಗಳಿಗೆ ಗೂಸಾ ಇಕ್ಕಿದ್ದಾರೆ.

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಇನ್ನು ಆರೋಪಿ ಫಯೀಮ್ ಕಟಪಾಡಿಯಲ್ಲಿ ನೆಲೆಸಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಈತ ಕಾರ್ನಾಡುವಿನಲ್ಲಿ ಸೆಲೂನ್ ಅಂಗಡಿ ನಡೆಸುತ್ತಿದ್ದು ಬದಿಯಲ್ಲಿದ್ದ ಫ್ಯಾನ್ಸಿ ಸೆಂಟರ್ ನಲ್ಲಿ ಇದೇ ಯುವತಿ ಕೆಲಸ ಮಾಡುತ್ತಿರುವಾಗ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಈ ಘಟನೆಯಿಂದ ಮುಲ್ಕಿ ಪರಿಸರ ಬೂದಿ ಮುಚ್ಚಿದ ಕೆಂಡದಂತಿದು ಠಾಣೆಯ ಹೊರಬದಿಯಲಿ ಸಂಘಟನೆಯ

ಈ ಘಟನೆಯಿಂದ ಮುಲ್ಕಿ ಪರಿಸರ ಬೂದಿ ಮುಚ್ಚಿದ ಕೆಂಡದಂತಿದ್ದು ಠಾಣೆಯ ಹೊರಬದಿಯಲ್ಲಿ ಸಂಘಟನೆಯ ನಾಯಕರು ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ : ಉಡುಪಿ : ಕಡಿಯಾಳಿ ತಿರುಗುವ ಮುಚ್ಚಿಗೆ ರಚಿಸಿದ್ದ ಶಿಲ್ಪಿ ಸುದರ್ಶನ ಆಚಾರ್ಯರಿಗೆ

Post a Comment

0 Comments

Advertisement