ಯಕ್ಷ ಚೈತನ್ಯದ 18 ನೇ ವಾರ್ಷಿಕೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಯಕ್ಷ ಚೈತನ್ಯ ಅಶ್ವತ್ಥಪುರ ಇದರ 18 ನೇ ವರ್ಷದ ವಾರ್ಷಿಕೋತ್ಸವವು ಬ್ರಹ್ಮಾನಂದ ಸದನ ಅಶ್ವತ್ಥಪುರ ಇಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯಕ್ಷಲೋಕದ ದಂಪತಿಗಳು ಎಂದು ಖ್ಯಾತಿ ಪಡೆದ ಹಾಗೂ ಯಕ್ಷರಂಗದ ಪ್ರಪ್ರಥಮ ಭಾಗವತೆ ಖ್ಯಾತಿಯ  ಲೀಲಾವತಿ ಬೈಪಾಡಿತ್ತಾಯ ಹಾಗೂ ಅವರ ಪತಿ ಪ್ರಸಿದ್ಧ ಮದ್ದಳೆ ವಾದಕರಾದ ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳನ್ನು  ಸನ್ಮಾನಿಸಲಾಯಿತು

ಅದೇ ರೀತಿ ಈ ವರ್ಷದ ಯಕ್ಷನಿಧಿ ಯನ್ನು ಪ್ರಸಿದ್ಧ ಹಾಸ್ಯಕಲಾವಿದರಾದ ಭಾಗಮಂಡಲ ಮಹಾಬಲೇಶ್ವರ ಭಟ್ ಇವರಿಗೆ ನೀಡಲಾಯಿತು.

ಸಭಾಧ್ಯಕ್ಷತೆ ವಹಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಮಂಡಳಿ ನಿಗಮದ ಸದಸ್ಯರೂ ಸ್ಥಳೀಯರೇ ಆದ P.C. ಶ್ರೀನಿವಾಸ್  ಮಾತನಾಡಿ ಯಕ್ಷಕಲೆಯನ್ನು ಉಳಿಸಿ ಬೆಳೆಸಿ ಪೋಷಿಸಿದ ಈಗಲೂ ,ಸಾವಿರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಹಿಮ್ಮೇಳ ಹಾಡುಗಾರಿಕೆ,ಚೆಂಡೆ,ಮದ್ದಳೆ ಕಲಿಸುತ್ತಿರುವ ಹಿರಿಯ ದಂಪತಿಗಳನ್ನು ಸನ್ಮಾನಿಸುವ ಯೋಗ ನನ್ನ ಪಾಲಿಗೆ ಬಂದುದು ಸುಕೃತದ ಫಲವೆಂದೇ ತಿಳಿಯುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಸೀತಾರಾಮಚಂದ್ರ ದೇವಳದ ಮೊಕ್ತೇಸರ ರಂಗನಾಥ್ ಭಟ್, ಉದ್ಯಮಿ ಹಾಗೂ ಬಡಗ ಮಿಜಾರು ಗ್ರಾಮ ಪಂಚಾಯತ್ ಸದಸ್ಯ B.L. ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

ಯಕ್ಷಚೈತನ್ಯದ ಅಧ್ಯಕ್ಷ ಕೃಷ್ಣಮೂರ್ತಿ ಕಟೀಲು ಸ್ವಾಗತಿಸಿ, ಸಂಚಾಲಕ ಸದಾಶಿವ ನೆಲ್ಲಿಮಾರ್ ಸನ್ಮಾನಿತರ ಅಭಿನಂದನಾ ಪತ್ರಗಳನ್ನು ವಾಚಿಸಿದರು, ಶಿವದತ್ತ ಭಟ್  ನಿರೂಪಿಸಿದರು. 

 ಕಾರ್ಯದರ್ಶಿ ಕೃಷ್ಣಮೂರ್ತಿ ಮಾಯಣ ಧನ್ಯವಾದಗೈದರು. ಬಳಿಕ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ಗರುಡ ಗರ್ವಭಂಗ ಎಂಬ ತಾಳಮದ್ದಳೆ ಜರುಗಿತು.

Post a Comment

0 Comments