ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಇಡೀ ದೇಶದಲ್ಲಿ ಮೊದಲ ಬಾರಿಗೆ ಎನ್.ಐ.ಎ, ಇ.ಡಿ ಮತ್ತು ಸ್ಥಳೀಯ ಪೊಲೀಸರ ತಂಡ ವಿವಿಧ ರಾಜ್ಯಗಳಲ್ಲಿ ಏಕಕಾಲದಲ್ಲಿ ಪಿ.ಎಫ್.ಐ ಮತ್ತು ಎಸ್ ಡಿ ಪಿ ಐ ಸಂಘಟನೆಯ ಮುಖಂಡರು, ಚಟುವಟಿಕೆಗಳು ನಡೆಸುವ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಆಪರೇಶನ್ ಆಕ್ಟೋಪಸ್ ಹೆಸರಿನಲ್ಲಿ ಸುಮಾರು 90 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಿದ ದಾಳಿಯಲ್ಲಿ ಸಂಘಟನೆಯ ಮುಖಂಡರು ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಬಂಧಿತರ ವಿಚಾರಣೆ ಸಂದರ್ಭದಲ್ಲಿ ಸ್ಫೋಟಕ ಮಾಹಿತಿಯೊಂದು ಹೊರ ಬಿದಿದ್ದು, ವಿಶ್ವ ನಾಯಕ ದೇಶದ ಪ್ರಧಾನಿ ನರೇಂದ್ರ ಮೋದಿ ಬಿಹಾರ ಭೇಟಿ ವೇಳೆ ಕೋಮು ದಂಗೆ ಸೃಷ್ಟಿಸಿ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಚು ರೂಪಿಸಿತ್ತೆಂಬ ಆಘಾತಕಾರಿ ವಿಷಯ ಬಟಾ ಬಯಲಾಗಿದೆ.
ಇ ಡಿ ವಶದಲ್ಲಿರುವ ಪಿಎಫ್ಐ ಮುಖಂಡ ಶಫೀಕ್ ಪಾಯೆಥ್ ಎಂಬಾತ ಪ್ರಧಾನಿ ಹತ್ಯೆ ಸ್ಕೆಚ್ ಬಗ್ಗೆ ಬಾಯಿಬಿಟ್ಟಿದ್ದಾನೆ. ಜುಲೈ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಬಿಹಾರ ಭೇಟಿ ವೇಳೆ ಕೋಮು ಧಂಗೆ ಸೃಷ್ಟಿಸಲು ಪಿಎಫ್ಐ ಪ್ಲ್ಯಾನ್ ಮಾಡಿಕೊಂಡಿತ್ತು. ಇದೇ ಸಂದರ್ಭ ಪ್ರಧಾನಿ ಹತ್ಯೆಗೂ ಕುತಂತ್ರ ಹೆಣೆದಿದ್ದರು ಎಂದು ಎನ್ಐಎ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿಯೇ ಪಿಎಫ್ಐ ಸದಸ್ಯರು ವಿದೇಶಗಳಿಂದ ದೇಣಿಗೆ ಸಂಗ್ರಹಿಸಿದ್ದರು ಎಂಬ ಆಘಾತಕಾರಿ ವಿಷಯಗಳು ಹೊರಬಿದ್ದಿವೆ.
ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಸಾಮೂಹಿಕ ದಾಳಿ ಮಾದರಿಯಲ್ಲಿ ತಯಾರಿಯೂ ನಡೆದಿತ್ತು. ಇದಕ್ಕಾಗಿಯೇ ಪಿಎಫ್ಐ ಮುಖಂಡರು ಕೆಲವರಿಗೆ ತರಬೇತಿ ನೀಡಿದ್ದರು. ಈ ಟ್ರೈನಿಂಗ್ ಪಡೆದ ತಂಡ ಬಿಹಾರದ ಪಟನಾದಲ್ಲಿ ಬೀಡು ಬಿಟ್ಟಿತ್ತು ಎಂದು ಶಫೀಕ್ ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಈ ದುಷ್ಕರ್ಮಿಗಳ ಪಡೆಗೆ ಅಗತ್ಯವಾದ ಹಣಕಾಸು ನೆರವು ಕೇವಲ ನಗರಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಹರಿದುಬಂದಿತ್ತು. ಇದಕ್ಕಾಗಿಯೇ ಪಿಎಫ್ಐ 120 ಕೋಟಿ ರೂ ಸಂಗ್ರಹಿಸಿ, ದಾಳಿಗೆ ಬೇಕಾದ ಅಗತ್ಯ ಸಾಧನ, ತರಬೇತಿ ಉಪಕರಣ, ದುಷ್ಕರ್ಮಿಗಳು ತಂಗಲು ಬಾಡಿಗೆ ಮನೆ ಹಾಗೂ ಇತರ ವೆಚ್ಚಗಳನ್ನು ನಿರ್ವಹಿಸಿತ್ತು ಎಂಬುದು ಸಹ ತನಿಖೆ ಸಂದರ್ಭ ಗೊತ್ತಾಗಿದೆ.
0 Comments