ರಾಷ್ಟ್ರಗೀತೆಯನ್ನು ಅವಮಾನಕರ ಮತ್ತು ಅವಹೇಳನಕಾರಿಯಾಗಿ ತಿರುಚಿ ಬರೆದು ರಾಷ್ಟ್ರಗೀತೆಗೆ ಅಗೌರವ ತೋರಿಸಿದ್ದ ಸಾಹಿತಿ ಶ್ರೀ ಬರಗೂರು ರಾಮಚಂದ್ರಪ್ಪನವರ ವಿರುದ್ಧ ಬಿಜೆಪಿ ಕಾನೂನು ಪ್ರಕೋಷ್ಟದ ವತಿಯಿಂದ ಕ್ರಿಮಿನಲ್ ದೂರು ಸಲ್ಲಿಸಿದೆ.
ವಿಧಾನಪರಿಷತ್ ಸದಸ್ಯರಾದ ಶ್ರೀ ಎನ್. ರವಿಕುಮಾರ್, ಶ್ರೀ ಛಲವಾದಿ ನಾರಾಯಾಣಸ್ವಾಮಿ, ಬಿಜೆಪಿ ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕರಾದ ಶ್ರೀ ಯೋಗೇಂದ್ರ ಹೊಡಾಘಟ್ಟ, ಹಾಗೂ ದೂರುದಾರರಾದ ಶ್ರೀ ವಿ.ಎಲ್.ಜಗದೀಶ್ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದರು.
ಬರಗೂರು ರಾಮಚಂದ್ರಪ್ಪನವರು ತಮ್ಮ ಭರತನಗರಿ ಎಂಬ ಪುಸ್ತಕದಲ್ಲಿ ಈ ರೀತಿಯ ಅಪರಾಧಿಕ ಬರಹವನ್ನು ಬರೆದಿದ್ದಾರೆ, 2016 ರಲ್ಲಿ ರಾಮಚಂದ್ರಪ್ಪನವರ ಪರಿಚಯ ಪುಸ್ತಕದಲ್ಲಿ ಈ ಬರಹದ ಬಗ್ಗೆ ಉಲ್ಲೇಖವಿರುವುದು ಇತ್ತೀಚೆಗೆ ನಮ್ಮ ಗಮನಕ್ಕೆ ಬಂದಿದ್ದು, ನಂತರ ಮೂಲ ಪುಸ್ತಕವನ್ನು ಪರಿಶೀಲಿಸಲಾಗಿ ಸದರಿ ಅಪರಾಧಿಕ ಬರಹ ಇರುವುದು ಧೃಡಪಟ್ಟ ಹಿನ್ನೆಲೆಯಲ್ಲಿ ಶ್ರೀ ಬರಗೂರು ರಾಮಚಂದ್ರಪ್ಪನವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡು ಸೂಕ್ತ ಕಾನೂನುಕ್ರಮ ತೆಗೆದುಕೊಳ್ಳಲು ಕೋರಿ ಸದರಿ ದೂರು ಸಲ್ಲಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
0 Comments