ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಈ ನಡುವೆ ತಮಿಳುನಾಡಿನ ವಿಸಿಕೆ ರಾಜಕೀಯ ಪಕ್ಷವು ಸಿದ್ದರಾಮಯ್ಯನವರಿಗೆ ಪ್ರಶಸ್ತಿಯನ್ನು ಘೋಷಿಸಿದ್ದು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಜೆಪಿ ರಾಜ್ಯ ವಕ್ತಾರ ಪಿ. ರಾಜೀವ್ ಪ್ರಶ್ನೆಗಳ ಸುರಿಮಳೆಯನ್ನು ಗೈದಿದ್ದಾರೆ.
ವಿಸಿಕೆ ಎನ್ನುವಂತಹ ಪಾರ್ಟಿ ರಾಹುಲ್ ಗಾಂಧಿ ಅವರ ಅಪ್ಪ ರಾಜೀವ್ ಗಾಂಧಿಯವರನ್ನು ಹತ್ಯೆಗೈದ ಸಂಘಟನೆಯ ರಾಜಕೀಯ ಪಾರ್ಟಿಯಾಗಿದೆ. ರಾಜೀವ್ ಗಾಂಧಿ ಹಂತಕರನ್ನು ಶತಾಯಗತಾಯ ಬಿಡುಗಡೆಗೊಳಿಸಬೇಕೆಂಬ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಅದನ್ನು ಯಶಸ್ವಿಗೊಳಿಸಿದ್ದು ಇದೇ ವಿಕೆಸಿ ಎನ್ನುವಂತಹ ಪಾರ್ಟಿ. ಈಗ ಈ ಸಂಘಟನೆ ಹಾಗೂ ಈ ರಾಜಕೀಯ ಪಕ್ಷ ಕೊಡ ಮಾಡುವ ಸಿದ್ದರಾಮಯ್ಯನವರ ಪ್ರಶಸ್ತಿಯನ್ನು ಸ್ವೀಕರಿಸಲು ಸಿದ್ದರಾಮಯ್ಯನವರು ಮುಂದಾಗಿದ್ದು ಇದು ಅಚ್ಚರಿಯ ಬೆಳವಣಿಗೆಯಾಗಿದೆ ಎಂದು ರಾಜೀವ್ ತಿಳಿಸಿದರು. ಈ ನಡುವೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿಗೆ ಪಿ ರಾಜೀವ್ ಪ್ರಶ್ನಿಸಿದ್ದು ಇದರ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು. ತಮ್ಮ ತಂದೆಯ ಹಂತಕರ ಬೆಂಬಲಿಗರು ನೀಡುವ ಪ್ರಶಸ್ತಿ ಯನ್ನು ನಿಮ್ಮ ಪಕ್ಷದ ಮುಖಂಡ ಸಿದ್ದರಾಮಯ್ಯ ಸ್ವೀಕರಿಸುತ್ತಿರುವುದು ನಿಮ್ಮ ಘನತೆಯನ್ನು ಹೆಚ್ಚಿಸುವುದೇ ಅಥವಾ ಕುಗ್ಗಿಸುವುದೇ ಎಂಬ ಸ್ಪಷ್ಟನೆಯನ್ನು ನೀಡಿ ಎಂಬ ಸವಾಲನ್ನು ರಾಹುಲ್ ಗಾಂಧಿಗೆ ಹೇಳಿದ್ದಾರೆ.
0 Comments