ಉಳ್ಳಾಲದಲ್ಲಿ ನಡೆಯಿತಾ ಮತ್ತೊಂದು ತಲವಾರ್ ದಾಳಿ:ಪೊಲೀಸ್ ಕಮಿಷನರ್ ಹೇಳಿದ್ದೇನು?

ಜಾಹೀರಾತು/Advertisment
ಜಾಹೀರಾತು/Advertisment

 

ಪ್ರವೀಣ್ ನೆಟ್ಟಾರ್, ಫಾಝಿಲ್ ಹತ್ಯೆಯ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ಬಹುದೊಡ್ಡ ಹತ್ಯೆಯ ಸಂಚು ನಡೆಯಿತಾ ಎನ್ನುವ ಸಂಶಯಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ತೆರೆ ಎಳೆದಿದ್ದಾರೆ. ಉಳ್ಳಾಲದ ಯುವಕ ಕಿಶೋರ್ ಎಂಬ ವ್ಯಕ್ತಿ ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಉಳ್ಳಾಲದ ಅಜ್ಜಿನಡ್ಕ ಎಂಬಲ್ಲಿ ಮೂರು ಮಂದಿ ದುಷ್ಕರ್ಮಿಗಳಿಂದ ಕೊಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದ. ಕೆಲವೇ ಕ್ಷಣಗಳಲ್ಲಿ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತಲವಾರುಗಳಿಂದ ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಇದನ್ನು ತಪ್ಪಿಸಿಕೊಂಡು ಕಿಶೋರ್ ಎಂಬವರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಹಾಗೂ ಈ ಕಾರಣದಿಂದಾಗಿ ಕಿಶೋರ್ ಅವರ ಜೀವ ಉಳಿದಿದೆ ಎಂದು ಹೇಳಿಕೊಂಡಿದ್ದಾರೆ. 

ಮಾಹಿತಿ ತಿಳಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದಾರೆ. ತನಿಖಾ ಶೈಲಿಯಲ್ಲೇ ಮಾಹಿತಿ ಪಡೆದ ಶಶಿಕುಮಾರ್ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ. ಆ ಯುವಕ ಸುಳ್ಳು ಕಥೆ ಕಟ್ಟಿರುವುದಾಗಿ ಹೇಳಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದ ಕಮಿಷನರ್ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ

Post a Comment

0 Comments