ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸನ್ಮಾನ: ಹಾಸನಕ್ಕೆ ವರ್ಗಾವಣೆಗೊಂಡ ಮೂಡುಬಿದಿರೆ ಬಿಇಒ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆಯಲ್ಲಿ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ಹಾಸನಕ್ಕೆ ವರ್ಗಾವಣೆಗೊಂಡಿರುವ ಮೂಡುಬಿದಿರೆಯ ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ದೇವರಾಜು ಇವರನ್ನು ಸರ್ಕಾರಿ ಪ್ರಾಥಮಿಕ ಶಾಲೆ ಪಣಪಿಲ ಹಾಗೂ ಸರ್ಕಾರಿ ಪ್ರೌಢಶಾಲೆ ಅಳಿಯೂರು ಇಲ್ಲಿ ಅಭಿನಂದಿಸಲಾಯಿತು.


 ಸುಮಾರು 11 ತಿಂಗಳ ಕಾಲ ಮೂಡುಬಿದಿರೆಯ ಕ್ಷೇತ್ರದ ಶಿಕ್ಷಣಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಸರ್ಕಾರಿ ಶಾಲೆಗಳ ಏಳಿಗೆಗಾಗಿ ದುಡಿದು ಸರಳತೆಯೊಂದಿಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸಿ ಅನೇಕ ಶಿಕ್ಷಕರಿಗೆ ಪ್ರೀತಿ ಪಾತ್ರರಾಗಿದ್ದರು. ಈ ಹಿನ್ನೆಲೆಯಲ್ಲಿ ಹಾಸನಕ್ಕೆ ವರ್ಗಾವಣೆಯಾದ ನಂತರ ಪಣಪಿಲ ಪ್ರಾಥಮಿಕ ಶಾಲೆ ಶಿಕ್ಷಕರ ವತಿಯಿಂದ ಮತ್ತು ಅಕ್ಕರೆ ಕನ್ನಡ ಸಂಘ ಅಳಿಯೂರು ಪ್ರೌಢ ಶಾಲೆಯ ಸಂಘಟನೆಯ ವತಿಯಿಂದ ಅವರನ್ನು ಅಭಿನಂದಿಸಲಾಯಿತು.

Post a Comment

0 Comments