ಮೂಡುಬಿದಿರೆ ತಾಲೂಕಿನ ದರಗುಡ್ಡೆ ಗ್ರಾಮದಲ್ಲಿರುವ ಪಣಪಿಲ ಅರಮನೆಗೆ ಸಂಬಂಧಪಟ್ಟ ಶ್ರೀ ಸೋಮನಾಥೇಶ್ವರ ದೇವಸ್ಥಾನದ ದೇವರ ಸಂಕೋಚ ಪೂಜಾ ಕಾರ್ಯಕ್ರಮ ಇಂದು ನಡೆಯಿತು. ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನವನ್ನು ಗ್ರಾಮಸ್ಥರು ಜೀರ್ಣೋದ್ಧಾರ ಮಾಡಲು ಇಚ್ಚಿಸಿದ್ದು ಈ ನಿಟ್ಟಿನಲ್ಲಿ ಸಮಿತಿಯು ರಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಗರ್ಭಗುಡಿಯ ಕೆಲಸ ಕಾರ್ಯ ನಡೆಯಲಿದ್ದು ಇಂದು ದೇವಸ್ಥಾನದ ಸಂಕೋಚ ಕಾರ್ಯಕ್ರಮ ನಡೆಯಿತು.
ಇಟಲ ಶ್ರೀ ಸೋಮನಾಥೇಶ್ವರ ದೇವರು ಹಾಗೂ ಮಹಾಗಣಪತಿ ದೇವರು ಮತ್ತು ನಾಗದೇವರ ಸಾನಿಧ್ಯವನ್ನು ಸಂಕೋಚ ಮಾಡಲಾಗಿದ್ದು ಮುಂದಿನ ಹಂತದಲ್ಲಿ ದೇವಸ್ಥಾನವನ್ನು ವಿಸರ್ಜಿಸಿ ಜೀರ್ಣೋದ್ದಾರ ಮಾಡುವಲ್ಲಿ ಕಾರ್ಯರೂಪಕ್ಕೆ ಬರಲಾಗುವುದು ಎಂದು ಸಮಿತಿಯ ಪ್ರಮುಖರು ತಿಳಿಸಿದರು.
ಪಣಪಿಲ ಅರಮನೆಯ ಮುಖ್ಯಸ್ಥರಾದ ಶ್ರೀ. ಬಿ.ವಿಮಲ್ ಕುಮಾರ್ ಶೆಟ್ಟಿ ಹಾಗೂ ವಂಶಸ್ಥರು,ಮಾಗಣೆಯ ತಂತ್ರಿಗಳು,ಅಸ್ರಣ್ಣರು, ಗುತ್ತು ಬರ್ಕೆಯವರ ಹಾಗೂ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಮುಂದಾಳತ್ವದಲ್ಲಿ ಸಂಕೋಚ ಪೂಜಾ ಕಾರ್ಯಕ್ರಮ ನಡೆಯಿತು. ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್, ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡುಬಿದಿರೆ, ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕೆಲ್ಲಪುತ್ತಿಗೆ ಮನೆತನದ ಶ್ರೀ. ಕೆ.ಪಿ. ಜಗದೀಶ್ ಅಧಿಕಾರಿ, ಕೆ.ಎಮ್. ಎಫ್. ಅಧ್ಯಕ್ಷ ಸುಚರಿತ ಶೆಟ್ಟಿ ಹಾಗೂ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಕೇಶ್ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ಸಮಿತಿಯ ಪ್ರಮುಖರು ಸಹಿತ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
0 Comments