ಬಹುದಿನದ ಕನಸಿಗೆ ಮುನ್ನುಡಿ: ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ಶಂಕುಸ್ಥಾಪನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮಂಗಳೂರಿನ ಲೇಡಿಹಿಲ್ ಶಾಲೆ ಬಳಿಯಿರುವ ಲೇಡಿಹಿಲ್ ವೃತ್ತಕ್ಕೆ ನಮ್ಮ ಶ್ರೀ ನಾರಾಯಣಗುರು ವೃತ್ತ ಎಂಬ ಹೆಸರನ್ನು ಮರುನಾಮಕರಣ ಮಾಡಿದ ಬೆನ್ನಲ್ಲೇ ಈಗ ನಾರಾಯಣ ಗುರುಗಳ ಪ್ರತಿಮೆ ಸ್ಥಾಪಿಸಲು ಮಂಗಳೂರು ಮಹಾನಗರ ಪಾಲಿಕೆ ಮೂಡ ಹಾಗೂ ಪ್ರತಿಷ್ಠಿತ ಬಿರುವೆರ್ ಕುಡ್ಲ ಸಂಘಟನೆ ಮುಂದಾಗಿದೆ. ಲೇಡಿಹಿಲ್ ಎಂಬ ಹೆಸರನ್ನು ಅಳಿಸಿ ಹಾಕಿ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಘೋಷಿಸಬೇಕು ಎಂಬ ಅನೇಕ ವರ್ಷಗಳ ಹಿಂದೂ ಸಂಘಟನೆಗಳ ಹಾಗೂ ಕೆಲ ಸಮುದಾಯದ ಹೋರಾಟಕ್ಕೆ ಮನ್ನಣೆ ದೊರಕಿದ್ದು ಇತ್ತೀಚೆಗೆ ಮಂಗಳೂರು ಮಹಾನಗರಪಾಲಿಕೆ ಹಾಗೂ ರಾಜ್ಯ ಸರ್ಕಾರ ಈ ವೃತ್ತವನ್ನು ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಘೋಷಿಸಿತ್ತು. ಇದರ ನಂತರ ಮಂಗಳೂರಿನ ಪ್ರತಿಷ್ಠಿತ ಬಿರುವೆರ್ ಕುಡ್ಲ ಸಂಘಟನೆ ಇಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆ ಸ್ಥಾಪಿಸಬೇಕು ಎಂಬ ಇಚ್ಛೆ ಹೊಂದಿದ್ದು ಇದಕ್ಕೆ ನಿನ್ನೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.


ಸುಮಾರು 48 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬ್ರಹ್ಮಶ್ರೀ ನಾರಾಯಣಗುರು ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಶಾಸಕ ಭರತ್ ಶೆಟ್ಟಿ, ಶಾಸಕ ವೇದವ್ಯಾಸ್ ಕಾಮತ್, ಮೂಡಾ ಅಧ್ಯಕ್ಷ ರವಿಶಂಕರ್, ಮಿಜಾರ್ ಬಿರುವೆರ್ ಕುಡ್ಲ ಸ್ಥಾಪಕರಾದ ಉದಯ ಪೂಜಾರಿ ಸಹಿತ ಇನ್ನಿತರ ಪ್ರಮುಖರು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಪ್ರೇಮಾನಂದ ಶೆಟ್ಟಿ ಹಾಗೂ ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶಂಕು ಸ್ಥಾಪನೆಯನ್ನು ನೆರವೇರಿಸಿದರು.

Post a Comment

0 Comments