ಕಲ್ಲಬೆಟ್ಟು ಸ್ಮಶಾನ ನಿರ್ಮಾಣ, ಮದ್ಯದಂಗಡಿಗೆ ದಲಿತ ಸಂಘರ್ಷ ಸಮಿತಿ ವಿರೋಧ


ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ, ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟು ಬಂಗಾಲಪದವಿನಲ್ಲಿ ಪುರಸಭೆ ಸ್ಮಶಾನ ನಿರ್ಮಿಸಲು ಹೊರಟಿರುವುದು ಹಾಗೂ ಕಲ್ಲಬೆಟ್ಟು ಶಿಕ್ಷಣ ಸಂಸ್ಥೆಗಳಿರುವ ಪರಿಸರದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ.ಕ. ಜಿಲ್ಲಾ ಶಾಖೆ ಖಂಡಿಸಿದೆ. 

ದ.ಸಂ.ಸ. ಜಿಲ್ಲಾ ಪ್ರಧಾಬ ಸಂಚಾಲಕ ಜಗದೀಶ್ ಪಾಂಡೇಶ್ವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಮಶಾನಕ್ಕಾಗಿ ಕಾಯ್ದಿರಿಸಿದ ಜಾಗದಲ್ಲಿ ಆರೋಗ್ಯ ಇಲಾಖೆಯ ಒಪ್ಪಿಗೆ ಪತ್ರ ಪಡೆದ ಬಳಿಕವಷ್ಟೇ ಕ್ರಮ ಜರಗಿಸಲು ಸಹಾಯಕ ಕಮಿಷನರ್ ಆದೇಶಿಸಿದ್ದರೂ ಆರೋಗ್ಯ ಇಲಾಖೆಯಿಂದ ಕಂದಾಯ ಅಧಿಕಾರಿಗಳು ಒಪ್ಪಿಗೆ ಪತ್ರಪಡೆಯದೆ ಪುರಸಭೆಗೆ ಹಸ್ತಾಂತರಿಸಿರುವುದು ಖಂಡನೀಯ. ಪುರಸಭಾ ಉಪಾಧ್ಯಕ್ಷೆ ದಲಿತರು ವಾಸಿಸುವಲ್ಲೇ ಸ್ಮಶಾನ ನಿರ್ಮಿಸುವ ಹುಮ್ಮಸ್ಸು ತೋರುತ್ತಿದ್ದಾರೆ ಎಂದು ಆಪಾದಿಸಿದ ಅವರು ಇಲ್ಲಿ ಮಾತ್ರವಲ್ಲೇ ಜಿಲ್ಲೆಯ ಎಲ್ಲೇ ಆದರೂ ದಲಿತರು ವಾಸಿಸುವ ಜಾಗದ ನಡುವೆ ಸ್ಮಶಾನ ನಿರ್ಮಿಸುವುದನ್ನು ವಿರೋಧಿಸುತ್ತೇವೆ ವಸತಿ ಪ್ರದೇಶ, ಹಲವು ಶಿಕ್ಷಣಾಲಯಗಳು, ನಾಗಬನ, ವೀರಾಂಜನೇಯ ಕ್ಷೇತ್ರ ಸಹಿತ ವಿವಿಧ ಧಾರ್ಮಿಕ ತಾಣಗಳಿರುವ ಕಲ್ಲಬೆಟ್ಟು -ಬಂಗಾಲ ಪದವು ಪ್ರದೇಶದಲ್ಲಿ ಮದ್ಯದಂಗಡಿ ತೆರೆಯುವ ಪ್ರಸ್ತಾಪವನ್ನೂ ಸಂಘಟನೆ ವಿರೋಧಿಸುತ್ತದೆ ಎಂದರು 

ಸಂಘಟನೆಯ ಮಂಗಳೂರು ತಾಲೂಕು ಸಂಚಾಲಕ ಕೆ.ಚಂದ್ರ ಕಡಂದಲೆ, ಶಿವಕುಮಾರ್ ಉಪಸ್ಥಿತರಿದ್ದರು.

Post a Comment

0 Comments