ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಇಡಿ ತನಿಖಾ ಸಂಸ್ಥೆಯು ವಿಚಾರಣೆಗೆ ಕರೆದಿದ್ದು ಈ ಹಿನ್ನಲೆಯಲ್ಲಿ ದೇಶದಾದ್ಯಂತ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಈ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತಿನ ಭರದಲ್ಲಿ ಭ್ರಷ್ಟಾಚಾರದ ಸುಳಿವನ್ನು ನೀಡಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಮಗೆ ಬೇಕಾದನ್ನೆಲ್ಲಾ ನೀಡಿದ್ದಾರೆ ನಾವು ಅವರಿಗೆ ಇಡಿ ಸಂಕಷ್ಟ ಬರುವಾಗ ಅವರ ಜೊತೆಯಲ್ಲಿ ನಿಲ್ಲಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ನೆಹರು ಪರಿವಾರದ ಹೆಸರಿನಲ್ಲಿ ದೇಶದಾದ್ಯಂತ ಕಾಂಗ್ರೆಸ್ಸಿಗರು 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿಟ್ಟಿದ್ದೇವೆ. ಈಗ ನಾವು ಅದರ ಋಣ ತೀರಿಸುವ ಸಮಯ ಬಂದಿದೆ, ಹೀಗಾಗಿ ಎಲ್ಲರೂ ಒಟ್ಟಾಗಿ ಇಡಿ ತನಿಖೆ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಹೋರಾಡೋಣ ಎಂಬ ಕರೆಯನ್ನು ನೀಡಿದ್ದು ನೆಹರು ಕುಟುಂಬವನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
0 Comments