ಇಟಲ ಗೆಳೆಯರ ಬಳಗ ಪಣಪಿಲ ಇದರ ಲಾಂಛನ ಅನಾವರಣ: ಆಗಸ್ಟ್ 21ರಂದು ಮೊಸರು ಕುಡಿಕೆ ಉತ್ಸವ


ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆಯ ಪಣಪಿಲ ಗ್ರಾಮದ ಶ್ರೀ ಇಟಲ ಗೆಳೆಯರ ಬಳಗ ಸಂಘಟನೆಯ ಲಾಂಛನ ಬಿಡುಗಡೆ ಕಾರ್ಯಕ್ರಮ ಇಂದು ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯಿತು. 12 ವರ್ಷಗಳಿಂದ ಪಣಪಿಲ ಗ್ರಾಮದಲ್ಲಿ ನಿರಂತರವಾಗಿ ಮೊಸರು ಕುಡಿಕೆ ಉತ್ಸವ ಹಾಗೂ ಸಾಧಕರನ್ನು ಅಭಿನಂದಿಸುವ ಕಾರ್ಯಕ್ರಮಗಳು ಮತ್ತು ವಿವಿಧ ಜನೋಪಯೋಗಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಇಟಲ ಗೆಳೆಯರ ಬಳಗ ಪಣಪಿಲ ತಂಡವು ಈ ಬಾರಿ 12ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ಆಯೋಜಿಸಿದ್ದು ಇದರ ಮುಂಚಿತವಾಗಿ ಸಂಘಟನೆಯ ಲಾಂಛನ ಅನಾವರಣ ಕಾರ್ಯಕ್ರಮವನ್ನು ಇಂದು ನಡೆಸಿತ್ತು.

ಸಮಿತಿಯ ಗೌರವಾಧ್ಯಕ್ಷರಾದ ಸುಧಾಕರ್. ಡಿ.ಪೂಜಾರಿ, ಅಧ್ಯಕ್ಷರಾದ ರಮಾನಾಥ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸಚಿನ್ ಪಣಪಿಲ, ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಅಶೋಕ್ ಶೆಟ್ಟಿ ಬೇಲೊಟ್ಟು, ಸದಸ್ಯರಾದ ಶ್ರೀ ಮುನಿರಾಜ್ ಶೆಟ್ಟಿ ಹಾಗೂ ಶ್ರೀ ದೀಕ್ಷಿತ್ ಪಣಪಿಲ ಸಹಿತ ಇತರೆ ಪ್ರಮುಖರು ಉಪಸ್ಥಿತರಿದ್ದರು. ಆಗಸ್ಟ್ 21ರಂದು ವಾರ್ಷಿಕ ಮೊಸರು ಕುಡಿಕೆ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷರು ಮಾಹಿತಿ ನೀಡಿದರು.

Post a Comment

0 Comments