163 ಫಲಾನುಭವಿಗಳಿಗೆ ವಸತಿ ಯೋಜನೆಯ ಕಾಮಗಾರಿಗೆ ಆದೇಶ ಪತ್ರ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರು, ದ.ಕ.ಜಿ.ಪಂ, ತಾ.ಪಂ. ಮೂಡುಬಿದಿರೆ ಇದರ ವತಿಯಿಂದ 2021-22 ನೇ ಸಾಲಿನ ಬಸವ ವಸತಿ ಹಾಗೂ ಡಾ| ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಿಗೆ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ನೀಡುವ ಕಾರ್ಯಕ್ರಮವು ಶನಿವಾರ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಿತು.

ಶಾಸಕ ಉಮಾನಾಥ್ ಎ ಕೋಟ್ಯಾನ್ ಅಧ್ಯಕ್ಷತೆ ವಹಿಸಿ , ಕಾರ್ಯಕ್ರಮವನ್ನು ಉದ್ಘಾಟಿಸಿ 163 ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಕೊರೋನಾ ಕಾರಣ 3 ವರ್ಷಗಳಲ್ಲಿ ಮನೆ ಮಂಜೂರಾಗದೇ ಜನರು ಕಂಗಲಾಗಿದ್ದು, ಇದೀಗ 2021-22ರಲ್ಲಿ  ಈ ಕನಸು ನನಸಾಗುತ್ತಿದೆ. ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ವಸತಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗುತ್ತಿದ್ದು ಫಲಾನುಭವಿಗಳು ಮನೆಯ ಕಾಮಗಾರಿಯನ್ನು ಕೂಡಲೇ ನಡೆಸಲು ಮುಂದಾಗಬೇಕು ಎಂದು ಹೇಳಿದರು.

ತಾ.ಪಂ ಆಡಳಿತಾಧಿಕಾರಿ, ಪಶು ಸಂಗೋಪಣೆ ಇಲಾಖೆ ಉಪನಿರ್ದೇಶಕ ಡಾ| ಪ್ರಸನ್ನ ಕುಮಾರ್ ಟಿ.ಜಿ, ಜಿಲ್ಲಾ ವಸತಿ ನೋಡಲ್ ಅಧಿಕಾರಿ ಸವಿತಾ ಹಾಗೂ ವಿವಿಧ ಪಂಚಾಯತ್‌ಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ತಾ.ಪಂ.ಇಒ ಅಧಿಕಾರಿ ದಯಾವತಿ ಎಂ ಸ್ವಾಗತಿಸಿ, , ನೋಡಲ್ ಅಧಿಕಾರಿ ಪ್ರಶಾಂತ್ ಫಲಾನುಭವಿಗಳ ಪಟ್ಟಿಯನ್ನು ಮಂಡಿಸಿದರು. ತಾ.ಪಂ ಸಹಾಯಕ ನಿರ್ದೇಶಕ ಪ್ರಭಾರ ರಮೇಶ್ ರಥೋಡ್ ಧನ್ಯವಾದಗೈದು, ನವೀನ್ ಅಂಬೂರಿ ನಿರೂಪಿಸಿದರು.

Post a Comment

0 Comments