ಆ.12ರಿಂದ 25ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ


ಜಾಹೀರಾತು/Advertisment
ಜಾಹೀರಾತು/Advertisment

 

ಬೆಂಗಳೂರು : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು ಆಗಸ್ಟ್ 12ರಿಂದ 25ರ ವರೆಗೆ ಪೂರಕ ಪರೀಕ್ಷೆ ನಡೆಯಲಿದೆ.

ಈ ಕುರಿತು ಶಿಕ್ಷಣ ಇಲಾಖೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ. ಆ.12ರಂದು ಕನ್ನಡ, ಅರೇಬಿಕ್ಆ.13ರಂದು ಭೂಗೋಳ ಶಾಸ್ತ್ರ, ಮನಶಾಸ್ತ್ರ,ಬೌತಶಾಸ್ತ್ರ ವಿಷಯಕ್ಕೆ, ಆ.16ಕ್ಕೆ ಹಿಂದಿ ಮಲಯಾಳಂ, ತಮಿಳು, ತೆಲುಗು, ಮರಾಠಿ, ಸಂಸ್ಕೃತ, ಫ್ರೆಂಚ್ ಭಾಷೆಗೆ ಪರೀಕ್ಷೆ ನಡೆಯಲಿದೆ.

ಆ.17ರಂದು ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ ಪರೀಕ್ಷೆ ನಡೆಯಲಿದೆ. ಆ.18ಕ್ಕೆ ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ, ಆ.19ಕ್ಕೆ ರಾಜ್ಯಶಾಸ್ತ್ರ ಮತ್ತು ಗಣಿತಶಾಸ್ತ್ರಕ್ಕೆ ಪರೀಕ್ಷೆ ನಡೆಯಲಿದೆ. ಆ.20 ರಂದು ತರ್ಕಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ವ್ಯವಹಾರ ಅಧ್ಯಯನ, ಆ.22 ರಂದು ಇಂಗ್ಲಿಷ್, ಮಾಹಿತಿ ತಂತ್ರಜ್ಞಾನ, ರೀಟೆಲ್, ಆಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್, ಆ.23ಕ್ಕೆ ಅರ್ಥಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ.

ಆ.24ಕ್ಕೆ ಇತಿಹಾಸ, ಸಂಖ್ಯಾಶಾಸ್ತ್ರ, ಕೊನೆಯ ದಿನ ಆ.25ರಂದು ಸಮಾಜಶಾಸ್ತ್ರ, ವಿದ್ಯನ್ಮಾನ ಶಾಸ್ತ್ರ, ಗಣಕ ವಿಜ್ಞಾನ ವಿಷಯಕ್ಕೆ ಪರೀಕ್ಷೆ ನಡೆಯಲಿದೆ.

Post a Comment

0 Comments