ಫಲಾನುಭವಿಗಳ ಸಮಾವೇಶ- ಅರ್ಹರಲ್ಲದ ವ್ಯಕ್ತಿಗಳಿಂದ ಅವರ ಯೋಜನೆ ವಿರುದ್ಧ ಪ್ರತಿಭಟನೆ : ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಕಿಡಿ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ದೇಶದ ಪ್ರಧಾನಿ  ಮೋದಿ ಅವರು ದಿನದ ೨೪ ಗಂಟೆಗಳ ಕಾಲ ದುಡಿದು ಬಡವರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಭ್ರಷ್ಟಾಚಾರ ರಹಿತ ಸೇವೆಯನ್ನು ಕಳೆದ ೮ ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ಇದೀಗ ರಾಷ್ಟ್ರೀಯ ವಿಚಾರಧಾರೆಯನ್ನಿಟ್ಟು ಯುವಕರಲ್ಲಿ ರಾಷ್ಟ್ರ ಭಕ್ತಿ, ಆತ್ಮಸ್ಥೆರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ರಕ್ಷಣಾ ವ್ಯವಸ್ಥೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ 'ಅಗ್ನಿ ಪಥ್ ಯೋಜನೆಯನ್ನು ಜಾರಿಗೆ ತಂದಿದ್ದು ಇದಕ್ಕೆ ಸೈನ್ಯಕ್ಕೆ ಸೇರಲು ಅರ್ಹರಲ್ಲದ ಕೆಲವು ವ್ಯಕ್ತಿಗಳು ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಕಿಡಿಕಾರಿದ್ದಾರೆ.

ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ೮ ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಮೂಲ್ಕಿ ಮೂಡ ಇದಿರ ಮಂಡಲದ ವತಿಯಿಂದ ಸ್ಕೌಟ್ಸ್ & ಗೈಡ್ಸ್, ಕನ್ನಡ ಭವನದಲ್ಲಿ ಭಾನುವಾರ ನಡೆದ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

 ಭಾರತ ಸದೃಢವಾಗಬೇಕೆಂಬ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾನೂನನ್ನು ಮತ್ತು ಹೊಸ ಕೃಷಿ ನೀತಿಯನ್ನು ಹಾರಿಗೆ ತರಲು ಮುಂದಾದಾಗ ಒಂದು ವರ್ಗದ ಜನರು ಗೊಂದಲವ ನ್ನು ಸೃಷ್ಟಿಸಿದ್ದಾರೆ. ಇದೀಗ ಪಂಡಿತ್‌ ದೀನ್ ದಯಾಳ್ ಅವರ ಕನಸನ್ನು ನನಸು ಮಾಡುವ ಕೆಲಸಕ್ಕೆ ಕೇಂದ್ರ ಸರಕಾರವು ಹೆಜ್ಜೆ ಇಟ್ಟಿದ್ದು ಯುವಕರಿಗೆ ಸೇನೆಯಲ್ಲಿ ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಅಗ್ನಿಪಥ್ ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತರಲು ಮುಂದಾದಾಗ ಅದನ್ನು ಹತ್ತಿಕ್ಕುವಂತಹ ಕೆಲಸಗಳು ನಡೆಯುತ್ತಿದ್ದು ಈ ಬಗ್ಗೆ ಜಾಗೃತರಾಗಬೇಕಾಗಿದೆ ಎಂದ ಹೇಳಿದ ಅವರು ಸರಕಾರ ವಿವಿಧ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವಂತಹ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದರು.


ಮಂಡಲಾಧ್ಯಕ್ಷರಾದ ಸುನಿಲ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

 ಶಾಸಕ ಉಮಾನಾಥ ಎ.ಕೋಟ್ಯಾನ್‌ ಮಾತನಾಡಿ ಮೋದಿ ಅವರು ಕಳೆದ ೮ ವರ್ಷಗಳಲ್ಲಿ ದೇಶಕ್ಕೆ ಉತ್ತಮ ಆಡಳಿತವನ್ನು ನೀಡಿದ್ದಾರೆ, ಗ್ರಾಮೀಣ ಮಟ್ಟದ ಜನರಿಗೆ ಸವಲತ್ತುಗಳು ಸಿಗಬೇಕೆಂಬ ಉದ್ದೇಶವನಿಟ್ಟುಕೊಂಡು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ೨೪*೭ ನೀರಿನ ವ್ಯವಸ್ಥೆ, ಉಚಿತ ಗ್ಯಾಸ್, ಆರೋಗ್ಯವಾಗಿ ಆಯುಷ್ಮಾನ್ ಯೋಜನೆ, ಜನರಿಕ್ ಮೆಡಿಷಿನ್‌ನ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದ ಅವರು ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ವಂ, ಅಲ್ಲಾ ಉಪಾಧ್ಯಕ್ಷ ಈಶ್ವ‌ ಕಟೀಲ್‌, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್‌, ಮೂಡ ಅಧ್ಯಕ್ಷ ಮೇಘನಾಥ್ ಶೆಟ್ಟಿ, ಕೆ.ಎಂ. ಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಮಂಡಲ ಫಲಾನುಭವಿಗಳ ಪ್ರಕೋಷ್ಟದ ಸಂಚಾಲಕ ಬೋಳ ವಿಶ್ವನಾಥ್‌ ಕಾಮತ್, ಮತ್ತಿಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕುಮಾರ್, ಮಂಡಲ ಪ್ರಧಾನಕಾರ್ಯದರ್ಶಿ ಗೋಪಾಲ್ ಶೆಟ್ಟಿಗಾರ್, ಮತ್ತು ಕೇಶವ್ ಕರ್ಕೆರಾ ಹಾಗೂ ಮಂಡಲದ ಉಪಾಧ್ಯಕ್ಷ ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.

Post a Comment

0 Comments