ಮೂಡುಬಿದಿರೆ : 2021-22ನೇ ಸಾಲಿನ ಪದವಿಪೂರ್ವ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಹತ್ತು ಸ್ಥಾನಗಳನ್ನು ಗಳಿಸಿ ಉತ್ತಮ ಸಾಧನೆಗೈದಿದ್ದಾರೆ .
ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಶ್ರೇಯಾ ಡೋಂಗ್ರೆ, ತನ್ಮಯಿ ಐ ಪಿ 595 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ. ಜೊತೆಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಹಿಮಾಂಶು ತೇಕ್ರಿವಾಲ್ ಹಾಗೂ ವಿಜ್ಞಾನದ ವಿದ್ಯಾರ್ಥಿನಿಯರಾದ ಈಕ್ಷಾ ಎ ಜಿ, ರಂಜನ್ ಎಚ್.ಆರ್. ನಿಯೋಮ ಸಲೋನಿ ಮಿರಾಂಡ 593ಅಂಕವನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಕ್ರಮವಾಗಿ ನಾಲ್ಕನೇ ಹಾಗೂ ಆರನೇ ಸ್ಥಾನವನ್ನು ಪಡೆದಿದ್ದಾರೆ. ನಿಶಾ ಅಭಿನಂದನ್(592) ಏಳನೇ ಸ್ಥಾನ, ಪ್ರೇಕ್ಷಾಅರವಿಂದ್(591)ಎಂಟನೇ ಸ್ಥಾನ , ಸಪ್ನಾ ಪ್ರಭು ಎಂ(590) ಒಂಭತ್ತನೇ ಸ್ಥಾನ ,ಹಾಗೂ ಶ್ರೀಗೌರಿ(589) ಹತ್ತನೇ ಸ್ಥಾನವನ್ನು ಪಡೆದಿದ್ದಾರೆ.
ಪರೀಕ್ಷೆ ಬರೆದ 463ವಿದ್ಯಾರ್ಥಿಗಳಲ್ಲಿ 296 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 164 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ100 ಫಲಿತಾಂಶ ಹಾಗೂ ವಿಜ್ಞಾನ ಪಟ್ಟಿ99.01% ಸಾಧಿಸಿದ್ದು ಒಟ್ಟು 99.40% ಫಲಿತಾಂಶವನ್ನು ಸಂಸ್ಥೆ ದಾಖಲಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಹರ್ಷ ವ್ಯಕ್ತಪಡಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ನೀಡಿದ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗವನ್ನು ಅಭಿನಂದಿಸಿದರು.
0 Comments