ನಮ್ಮ ಮೇಲೆ ಯಾವುದೇ ಪ್ರಭಾವಿ ಶಾಸಕರ ಒತ್ತಡವೂ ಇಲ್ಲ: ಪ್ರಾಂಶುಪಾಲೆ ಡಾ.ಅನುಸೂಯ ರೈ ಸ್ಪಷ್ಟನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮಂಗಳೂರು: ಮಂಗಳೂರು ವಿವಿ ಕಾಲೇಜಿನಲ್ಲಿ ಸುಮಾರು 44 ಮುಸ್ಲಿಂ ಮಕ್ಕಳಿದ್ದು, ವಿವಾದ ಒಂದು ತಂಡದಿಂದಷ್ಟೇ ಆಗಿದೆ. 15 ಮಂದಿ ವಿದ್ಯಾರ್ಥಿಗಳಷ್ಟೇ ಹಿಜಾಬ್ ಕುರಿತು ಮಾತನಾಡಿದ್ದಾರೆ. ನಿನ್ನೆ ಅವರು ಬಂದಾಗ ನಾವೇ ಹಿಜಾಬ್ ತೆಗೆದು ಬನ್ನಿ ಅಂತ ಕಳಿಸಿದ್ದೇವೆ ಎಂದು ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ನಿನ್ನೆಯೇ ಹಿಜಾಬ್ ತೆಗೆದು ಬನ್ನಿ ಎಂದು ಕಳುಹಿಸಿದ್ದೆವು. ಈ ಹಿನ್ನೆಲೆ ಅವರು ನಿನ್ನೆ ಡಿಸಿ ಕಚೇರಿಗೆ ಹೋಗಿದ್ದರು, ಆ 15 ಮಂದಿ ಇವತ್ತು ತರಗತಿಗೆ ಬಂದಿಲ್ಲ. ಅವರನ್ನ ಬಿಟ್ಟು ಉಳಿದ ಕೆಲ ಮಕ್ಕಳು ಹಿಜಾಬ್ ತೆಗೆದು ಕಾಲೇಜಿಗೆ ಬಂದಿದ್ದಾರೆ. 


ಕೆಲ ವಿದ್ಯಾರ್ಥಿಗಳು ಹೈ ಕೋರ್ಟ್ ತೀರ್ಪಿನ ಬಳಿಕ ಕಾಲೇಜಿಗೆ ಬರುತ್ತಿಲ್ಲ. ಮೂರ್ನಾಲ್ಕು ವಿದ್ಯಾರ್ಥಿಗಳು ಟಿಸಿ ತೆಗೆದುಕೊಂಡಿದ್ದಾರೆ. ಆದರೆ ಇದು ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆ ಅಲ್ಲ, 15 ವಿದ್ಯಾರ್ಥಿಗಳ ಸಮಸ್ಯೆ ಅಷ್ಟೇ.

ನಿನ್ನೆ ಕೆಲವು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಈ ಕಾಲೇಜನ್ನು ಜೆಎನ್‌ಯು ಆಗಿ ಪರಿವರ್ತಿಸುವ ಸಂಶಯವನ್ನು ತೋರಿಸುತ್ತಿದ್ದಾರೆ, ಕಮೂನಿಸ್ಟ್ ಶಕ್ತಿಗಳು ಇದರಲ್ಲಿ ಸಕ್ರಿಯವಾಗಿವೆ. ಕೆಲ ಪ್ರಾಧ್ಯಾಪಕರು ಇದಕ್ಕೆ ಕೈ ಜೋಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲೆ, ಯಾವುದೇ ಪ್ರಭಾವಿ ಶಾಸಕರ ಒತ್ತಡ ಅಂತ ಏನೂ ಇಲ್ಲ, ಅದು ಮಕ್ಕಳ ಆರೋಪ. ನನಗೆ ಎಲ್ಲಾ ಶಾಸಕರು ಕರೆ ಮಾಡಿ ಜೋರು ಮಾಡ್ತಿದಾರೆ, ಏನ್ ಆಗ್ತಿದೆ ಅಂತ. ಆದರೆ ಯಾವ ಶಾಸಕರೂ ಒತ್ತಡ ಹಾಕಿಲ್ಲ, ಅವರಿಗೂ ಅವರದ್ದೇ ಆದ ಪ್ರತಿಷ್ಠೆ ಇದೆ ಎಂದು ಸ್ಥಾಪಿಸಿದ್ದಾರೆ. 

ಆ 15 ಮಂದಿ ವಿದ್ಯಾರ್ಥಿಗಳು ಈ ವರ್ಷದಿಂದ ಆದೇಶ ಯಾಕೆ ಜಾರಿ ಮಾಡ್ತಿದೀರಿ ಅಂತಿದ್ದಾರೆ. ಕೋರ್ಟ್ ತೀರ್ಪಿನ ಮೊದಲು ನಮ್ಮ ಕಾಲೇಜಲ್ಲಿ ಶಿರವಸ್ತ್ರ ಹಾಕಲು ಅವಕಾಶ ಇತ್ತು. ಆದರೆ ತೀರ್ಪು ಬಂದ ಬಳಿಕ ಆನ್ ಲೈನ್ ತರಗತಿ ನಡೆಯುತ್ತಿತ್ತು. ಆಫ್‌ಲೈನ್ ಆದ ನಂತರ ಕೆಲ ವಿದ್ಯಾರ್ಥಿಗಳು ಹಿಜಾಬ್‌ಗೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ವಿವಿ ಸಿಂಡಿಕೇಟ್ ಸಭೆ ನಡೆಸಿ ಶಿರವಸ್ತ್ರವನ್ನ ಕಾಲೇಜು ನಿಯಮದಿಂದ ತೆಗೆಯಲಾಗಿದೆ. ಹಿಜಾಬ್ ಗೆ ಅವಕಾಶ ಇಲ್ಲ ಅಂತ ನೋಟೀಸ್ ಮಾಡಿದ್ರು ನಿನ್ನೆ ಕೆಲವರು ಹಿಜಾಬ್ ಧರಿಸಿ ಬಂದಿದ್ದರು. ಹೀಗಾಗಿ ನಾನೇ ಅವರನ್ನು ವಾಪಸ್ ಕಳುಹಿಸಿದ್ದೇವೆ. ನಿನ್ನೆ ಕೆಲ ಮಕ್ಕಳು ಕ್ಯಾಂಪಸ್‌ಗೂ ಹಿಜಾಬ್ ಬಿಡಬಾರದು ಅಂತ ಹೇಳಿದ್ದರು. ಕೊನೆಗೆ ಒತ್ತಾಯಕ್ಕೆ ಮಣಿದು ನಿನ್ನೆ ಕ್ಯಾಂಪಸ್ ನಲ್ಲೂ ನಿಷೇಧಿಸಲಾಗಿದೆ.

Post a Comment

0 Comments