ಗೋಪ್ರೇಮಿ ಪರಿಶಿಷ್ಟ ಜಾತಿ ಮಹಿಳೆಗೆ ನೆರವಾದ ಸಚಿವ ಕೋಟ.! ಶಾಸಕ ರಘುಪತಿ ಭಟ್ ಶಿಫಾರಸ್ಸಿಗೆ ಸ್ಪಂದನೆ

ಜಾಹೀರಾತು/Advertisment
ಜಾಹೀರಾತು/Advertisment

ಉಡುಪಿ : ಕಮಲಮ್ಮನ ಗೋಶಾಲೆಗೆ ಆವರಣಗೋಡೆ ನಿರ್ಮಿಸಲು ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯಿಂದ 15 ಲಕ್ಷ ರೂ ಅನುದಾನವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಜೂರು ಮಾಡಿದ್ದಾರೆ . 

ಬಿಜೆಪಿ ವತಿಯಿಂದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಧಿಕಾರಪದದ ಎಂಟನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ಈ ಕೊಡುಗೆಯನ್ನು ಪ್ರಕಟಿಸಲಾಗಿದೆ . 

ಈ ಬಗ್ಗೆ ಶಾಸಕ ಕೆ ರಘುಪತಿ ಭಟ್ ಸಚಿವರಿಗೆ ಉಡುಪಿ ಶಿಫಾರಸು ಮಾಡಿದ್ದರು.

 ಉಡುಪಿಯ ನಗರಸಭಾ ವ್ಯಾಪ್ತಿಯ ದೊಡ್ಡಣ್ಣಗುಡ್ಡೆಯ ಅಂಬೇಡ್ಕರ್ ಕಾಲನಿಯ ನಿವಾಸಿಯಾಗಿರುವ ಕಮಲಮ್ಮ ಗೋರಕ್ಷಣೆಯ ವಿಷಯದಲ್ಲಿ ಉಡುಪಿಯ ಮಾದರಿ ಮಹಿಳೆ . ಪರಿಶಿಷ್ಟ ಜಾತಿಯ ವಿಧವಾಗಿರುವ ಇವರು ತನಗೆ ಸರ್ಕಾರದಿಂದ ಒದಗಿದ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಸುಮಾರು 60 ಕ್ಕೂ ಅಧಿಕ ದೇಶಿ ಹಸುಗಳನ್ನು ಪೋಷಿಸುತ್ತಿದ್ದಾರೆ .


 ಕಮಲಮ್ಮನ ಇಡೀ ರಾಜ್ಯಕ್ಕೆ ಮಾದರಿಯಾದ ಪರಿಶಿಷ್ಟ ಜಾತಿಯ ಮಹಿಳೆ ಎಂಬ ನೆಲೆಯಲ್ಲಿ ವಿಶೇಷ ಕೋಟಾದಡಿ ಈ ಶಿಫಾರಸನ್ನು ಪರಿಗಣಿಸಿ ಈ ಅನುದಾನ ಮಂಜೂರು ಮಾಡಲಾಗಿದೆ .

ಈ ಗೋಶಾಲೆಗೆ ಸೂಕ್ತವಾದ ಆವರಣ ಇಲ್ಲ , ಕೆಲವು ಬಾರಿ ಗೋಹಂತಕರು ಗೋಕಳ್ಳರು ಸ್ಥಳೀಯ ಗೋವುಗಳನ್ನು ಕದ್ದೊಯ್ದಿದ್ದಾರೆ .

ಹೀಗಿರುವಾಗ ಕಳೆದ ವರ್ಷ ದೀಪಾವಳಿಯಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಾಸಕ ರಘುಪತಿ ಭಟ್ಟರೊಂದಿಗೆ ಕಮಲಮ್ಮನ ಗೋಶಾಲೆಗೆ ಬಂದು ಗೋವುಗಳಿಗೆ ಪೂಜೆ ನೆರವೇರಿಸಿ ಕಮಲಮ್ಮ ಮತ್ತು ಅವರ ಮಗನ ಕಾರ್ಯವನ್ನು ಶ್ಲಾಘಿಸಿದರು . 

ಅದೇ ಸಂದರ್ಭ ಶಾಸಕ ಭಟ್ ಅವರು ಮತ್ತು ಉಡುಪಿ ನಗರಸಭೆಯ ವತಿಯಿಂದ ಈ ಗೋಶಾಲೆಗೆ ಕೆಲವು ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿ , ವಿಶೇಷ ಪ್ರಕರಣವೆಂದು ಗುರುತಿಸಿ ಆವರಣಗೋಡೆಯನ್ನು ತುರ್ತಾಗಿ ನಿರ್ಮಿಸುವಂತೆ ಸಚಿವರು ಮನವಿ ಮಾಡಿದರು . 


ತನ್ನ ಹಸುಗಳ ರಕ್ಷಣೆಗೆ ಸರ್ಕಾರ ನೆರವಿಗೆ ಬಂದಿರುವುದಕ್ಕಾಗಿ ಸಂತೋಷಗೊಂಡ ಕಮಲಮ್ಮ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ರಘುಪತಿ ಭಟ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Post a Comment

0 Comments