ಮಂಗಳೂರು: ಮಂಗಳೂರಿನಲ್ಲಿ ಹಿಜಾಬ್ ವಿವಾದ ಮತ್ತೆ ಮುಂದುವರಿದಿದ್ದು, ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಬಂದಿದ್ದನ್ನು ವಿರೋಧಿಸಿ ಇತರ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಘಟನಾ ಸ್ಥಳಕ್ಕೆ ಯೂನಿವರ್ಸಿಟಿ ರಿಜಿಸ್ಟರ್ ಕಿಶೋರ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಿಜಾಬ್ ಕಾಲೇಜಿನಲ್ಲಿ ತರಬೇಕು ಎಂದು ಅವರಿಗೆ ಮನವಿ ಸಲ್ಲಿಸಿದ್ದರು.
ಆದರೆ ಹಿಜಾಬ್' ವಿವಾದ ಇಂದು ಕೂಡ ಮುಂದುವರಿದಿದ್ದು, ಸುಮಾರು 15 ಮಂದಿ ಹಿಜಾಬ್ ಧಾರಿ ಮುಸ್ಲಿಂ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಡಿಗ್ರಿ ಕಾಲೇಜಿಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹಿಂದೆ ಎರಡು ಬಾರಿ ಈ ವಿದ್ಯಾರ್ಥಿನಿಯರು ಡಿಸಿಯವರಿಗೆ ಮನವಿ ಮಾಡಿದರು. ಇದೀಗ ಮತ್ತೆ ಮನವಿ ಮಾಡಿಕೊಳ್ಳಲು ಮುಂದಾದ ಮುಸ್ಲಿಂ ವಿದ್ಯಾರ್ಥಿನಿಯರು, ಜಿಲ್ಲಾಧಿಕಾರಿಗಳು ಬರುವ ತನಕ ಇಲ್ಲೆ ಇರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
0 Comments