ನೇಣು ಬಿಗಿದು ಆತ್ಮಹತ್ಯೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ : ಅವಿವಾಹಿತ ವ್ಯಕ್ತಿಯೋರ್ವರ ಶವವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ  ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಕಡ್ಪಲಗುರಿಯಲ್ಲಿ ಸೋಮವಾರ ಪತ್ತೆಯಾಗಿದೆ.

  ತೆಂಕಮಿಜಾರಿನ ಮಂಗೇಬೆಟ್ಟು ಪಲ್ಲದ ಮನೆಯ ನಿವಾಸಿ ನಾರಾಯಣ ಗೌಡರ ಪುತ್ರ ಲಿಂಗಪ್ಪ (೩೭ವ) ಅವರ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಶವ ಇದಾಗಿದೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲಿಂಗಪ್ಪ ಅವರು ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರು. ಶನಿವಾರ ಮನೆಗೆ ಬಂದಿದ್ದ ಅವರು ಸಂಜೆ ವೇಳೆಗೆ ಪೇಟೆಗೆ ಹೋಗುವುದಾಗಿ ತಾಯಿಯ ಬಳಿ ಹೋಗಿದ್ದು ನಂತರ ಹಿಂತಿರುಗಿ ಮನೆಗೆ  ಬಂದಿರಲಿಲ್ಲ. ಸೋಮವಾರ ಮಧ್ಯಾಹ್ನದ ವೇಳೆ ಕಡ್ಪಲಗುರಿಯ ಕೃಷ್ಣಪ್ಪ ಎಂಬವರಿಗೆ ಸೇರಿದ ಜಾಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

  ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮಾನಸಿಕ ಖಿನ್ನತೆ ಹಾಗೂ ಆರ್ಥಿಕ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದಾರೆ.

Post a Comment

0 Comments