ರಾಜಕೀಯ ಪಕ್ಷಗಳಿಂದ ಕ್ರೈಸ್ತ ಸಮುದಾಯದ ಕಡೆಗಣನೆ- ಕ್ರೈಸ್ತ ಒಕ್ಕೂಟದ ಅಸಮಾಧಾನ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ರಾಜಕೀಯ ಪಕ್ಷಗಳು ಕ್ರೈಸ್ತ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡದೆ ಕಡೆಗಣಿಸುತ್ತಿದೆ ಎಂದು ಕ್ರೈಸ್ತ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದೆ. 

ಕ್ರೈಸ್ತ ಸಮುದಾಯವು ಬುಧವಾರ ಮೂಡುಬಿದಿರೆ ತಾಲೂಕು ಪತ್ರಕರ್ತರ ಕಚೇರಿಯಲ್ಲಿ

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕರ್ನಾಟಕ ಕ್ರೈಸ್ತ ಒಕ್ಕೂಟದ ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ ವಿಲ್ಪ್ರೆಡ್ ಮೆಂಡೋನ್ಸ, ಕ್ಯಾಥೋಲಿಕ್ ಯೂನಿಯನ್ ಮಾಜಿ ರಾಜ್ಯ ಕಾರ್ಯದರ್ಶಿ ಆಲ್ವಿನ್ ಮೆನೆಜಸ್ ಶಿಕ್ಷಣ, ಸಾಮಾಜಿಕ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಮುದಾಯವನ್ನು ರಾಜಕೀಯ ಪಕ್ಷಗಳು ಕಡೆಗಣಿಸುತ್ತಿರುವುದನ್ನು ವಿರೋಧಿಸಿದರು. 

ವಿಧಾನ ಪರಿಷತ್ ಚುನಾವಣೆಯಲ್ಲೂ ಸಮುದಾಯಕ್ಕೆ ಮಾನ್ಯತೆ ಸಿಕ್ಕಿಲ್ಲ. 1947ರಿಂದ ಬೆಂಬಲಿಸಿದ ಕಾಂಗ್ರೆಸ್ ಪಕ್ಷವೂ ಕಡೆಗಣಿಸಿರುವುದು ಬೇಸರ ಮೂಡಿಸಿದೆ. 

 ವಿವಿಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಸಮುದಾಯಕ್ಕೆ ಅವಕಾಶ ನೀಡಲು ಕೋರಿದ್ದರೂ ಚುನಾವಣೆ ಸಂದರ್ಭದಲ್ಲಿ ಅವಕಾಶ ನೀಡುತ್ತಿಲ್ಲ. ಹಾಗಾದರೆ ಕ್ರೈಸರ ಮತ ಬೇಡವೇ ಎಂದು ಪ್ರಶ್ನಿಸಿದರು. 

ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರಾದ ರಾಜೇಶ್ ಡಿಕೋಸ್ತ, ವಿನೋದ್ ಪಿಂಟೋ, ಜೈಸನ್ ಪಿರೇರಾ ಶಿರ್ತಾಡಿ, ರಿಚಾರ್ಡ್, ಜೀವನ್ ನಿಡ್ಡೋಡಿ, ಸೆಲ್ವಿನ್ ಕುಲಾಸೋ, ಕ್ಲಾರೆನ್ಸ್ ಲೋಬೊ ಆಲಂಗಾರು, ಪ್ರಕಾಶ್ ನಿಡ್ಡೋಡಿ, ವಲೇರಿನ್, ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Post a Comment

0 Comments