ಮೂಡುಬಿದಿರೆ: ಇಲ್ಲಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯೋರ್ವಳು ವಿದ್ಯಾರ್ಥಿನಿಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಬೆಂಗಳೂರು ವಿಜಯನಗರ ನಿವಾಸಿ ವೆಂಕಟರಮಣಯ್ಯ ಅವರ ಪುತ್ರಿ ಅಕ್ಷಿತಾ(೨೧)ಎಂದು ಗುರುತಿಸಲಾಗಿದೆ. ಈಕೆ ಆಳ್ವಾಸ್‌ನಲ್ಲಿ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿದ್ದಳು. ಗುರುವಾರ ಅಸೌಖ್ಯದ ಕಾರಣವೊಡ್ಡಿ ಮಧ್ಯಾಹ್ನದ ನಂತರ ತರಗತಿಗೆ ಹೋಗದೆ ಹಾಸ್ಟೆಲ್‌ನಲ್ಲಿ ಒಬ್ಬಳೆ ಉಳಿದವಳು ಬಾಗಿಲು ಭದ್ರ ಪಡಿಸಿ ಚೂಡಿದಾರದ ಶಾಲನ್ನು ಫ್ಯಾನಿಗೆ ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ.
ಕೌಟುಂಬಿಕ ಸಮಸ್ಯೆಯಿಂದ ಈಕೆಯ ತಂದೆ ತಾಯಿ ಮಧ್ಯೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದ್ದು ಇದರಿಂದ ತೀವ್ರ ಖಿನ್ನತೆಗೊಳಗಾದ ಅಕ್ಷಿತಾ ಆತ್ಮಹತ್ಯೆ ಮಾಡಿಕೊಳ್ಳು ಕಾರಣ ಇರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
0 Comments