ಆರ್.ಎಸ್.ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಆರೋಗ್ಯ ವಿಚಾರಿಸಿದ-ಸಚಿವ ಕೋಟಾ

ಜಾಹೀರಾತು/Advertisment
ಜಾಹೀರಾತು/Advertisment

 

 

ಬಂಟ್ವಾಳಆರ್.ಎಸ್.ಎಸ್ ನ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ನಿನ್ನೆ ತೀವ್ರ ಎದೆ ನೋವಿನಿಂದ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಹಿತ ಅನೇಕ ರಾಜಕೀಯ ನಾಯಕರು ಭಟ್‌ರವರ ಆರೋಗ್ಯ ವಿಚಾರಿಸಿದ್ದು, ಇಂದು ರಾಜ್ಯದ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ತೆರಳಿ ಡಾ.ಪ್ರಭಾಕರ್ ಭಟ್ ಅವರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಹಂಚಿಕೊಂಡ ಸಚಿವ ಕೋಟಾ ಶ್ರೀನಿವಾಸ ಪೂಜಾರಿ , ಹಿರಿಯರಾದ ಭಟ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು, ಅವರು ಶೀಘ್ರ ಗುಣವಾಗಲಿ ಎಂದು ಶುಭಹಾರೈಸಿದ್ದೇನೆ. ಸದ್ಯ ಅವರ ಆರೋಗ್ಯ ತೃಪ್ತಿದಾಯಕವಾಗಿದ್ದು ಸಮಾಧಾನವೆನಿಸಿದೆ ಎಂದು ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ

https://twitter.com/KotasBJP/status/1511613294267666435?s=19


Post a Comment

0 Comments