ಮೂಡಬಿದಿರೆ: ಇಟಲ ದೇವಸ್ಥಾನದಲ್ಲಿ ಮುಷ್ಠಿ ಕಾಣಿಕೆ ಹಾಗೂ ಜೀಣೋದ್ಧಾರದ ನಿಮಿತ್ತ ಧಾರ್ಮಿಕ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಕೊನ್ನಾರ ಮಾಗಣೆಯ ಪಣಪಿಲ ಅರಮನೆಗೆ ಸಂಬಂಧಿಸಿದ ಮಹಾತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ಕೆ ಚಾಲನೆ ನೀಡಿದ್ದು; ಈ ನಿಮಿತ್ತ "ಪುಂಡಿ ಪಣವು" (ಮುಷ್ಟಿ ಕಾಣಿಕೆ) ಹಾಕುವ ಕಾರ್ಯಕ್ರಮ ಪಣಪಿಲ ಅರಮನೆ, ಮಾಗಣೆಯ ಗುತ್ತು ಬರ್ಕೆ-ಗ್ರಾಮಸ್ಥರ ಹಾಗೂ ಪರವೂರ ಭಕ್ತಾದಿಗಳ ಸಂಕಲ್ಪದೊಂದಿಗೆ ಮಾಗಣೆ ತಂತ್ರಿಗಳಾದ ನರಸಿಂಹ ತಂತ್ರಿಗಳ ಮತ್ತು ಅಸ್ತರಾದ ನಾಗರಾಜ ಭಟ್ಟರವರ ನೇತೃತ್ವದಲ್ಲಿ ಏಪ್ರಿಲ್ 17ರಂದು 9-30 ರಿಂದ 11-30ರವರೆಗೆ ನಡೆಯಲಿದೆ. 

ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ನಿಮಿತ್ತ ಸ್ವರ್ಣಾರೂಢ ಪ್ರಶ್ನೆಯಲ್ಲಿ ಮೂಡಿಬಂದಿತ್ತು.  ಅದರಂತೆ ಜೀರ್ಣೋದ್ಧಾರ ಕೆಲಸವು ದೇವರ ಸನ್ನಿಧಿಯಲ್ಲಿ “ಮುಷ್ಠಿಕಾಣಿಕೆ” ಸಮರ್ಪಣಾ ಪುಣ್ಯ ಕಾರ್ಯದ ಮೂಲಕ ಪ್ರಾರಂಭವಾಗಲಿದೆ. 

ಧಾರ್ಮಿಕ ಸಭೆ:“ಮುಷ್ಠಿಕಾಣಿಕೆ” ಕಾರ್ಯಕ್ರಮದ ಸಂದರ್ಭದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಲಕ್ಷ್ಮೀಸತ್ಯನಾರಾಯಣ ವೀರಾಂಜನೇಯ ಕ್ಷೇತ್ರ ಕರಿಂಜೆಯ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಧರ್ಮಸ್ಥಳ ಕ್ಷೇತ್ರದ ಮಾತೃಶ್ರೀ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಉಮಾನಾಥ ಕೋಟ್ಯಾನ್,ಮಾಜಿ ಸಚಿವ ಅಭಯಚಂದ್ರ ಜೈನ್‌,  ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲು, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಪಂಚರತ್ನ ಹೋಟೆಲ್ ಮಾಲೀಕರಾದ ತಿಮ್ಮಯ್ಯ ಶೆಟ್ಟಿ, ಅಳಿಯೂರು ಹೇಮಾ ಸಭಾಭವನ ಕೆ. ಕೆ. ಪೂಜಾರಿ, ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಕೇಶ್‌ ಶೆಟ್ಟಿ, ಆನುವಂಶೀಯ ಆಡಳಿತ ಮೊಕ್ತಸರರಾದ ಪಣಪಿಲ ಅರಮನೆಯ ಬಿ. ವಿಮಲ್ ಕುಮಾರ್ ಶೆಟ್ಟಿ  ಕೊನ್ನಾರ ಮಾಗಣೆಯ ಗುತ್ತು, ಬರ್ಕೆ ಮತ್ತು ಗ್ರಾಮಸ್ಥರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 9.30 ಯಿಂದ ಆರಂಭಗೊಂಡು 11.30ಯವರೆಗೆ ದೇವಾಲಯಕ್ಕೆ ಸಂಬಂಧಿಸಿದ ಗ್ರಾಮಸ್ಥರಿಗೆ ಮುಷ್ಠಿ ಕಾಣಿಕೆ ಹಾಕುವ ಅವಕಾಶ ಇರುತ್ತದೆ ಎಂದು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಕೇಶ್ ಶೆಟ್ಟಿಯವರು ತಿಳಿಸಿದ್ದಾರೆ‌

Post a Comment

0 Comments