ಮೂಡುಬಿದಿರೆ : 2021-22ನೇ ಸಾಲಿನ ಶಿಕ್ಷಣದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳು ರ್ಯಾಂಕ್‌ಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ಒಟ್ಟು 26 ರ್ಯಾಂಕ್‌ಗಳನ್ನು ಗಳಿಸಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತೀ ಹೆಚ್ಚು ರ್ಯಾಂಕ್ ಗಳಿಸಿದ ಕಾಲೇಜು ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವಾಸ್.
ಅವರು ಇಂದು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕಳೆದ 12 ವರ್ಷಗಳಿಂದ ಸರಾಸರಿ 25 ಅಧಿಕ ರ್ಯಾಂಕ್‌ಗಳನ್ನು ಪಡೆಯುತ್ತಾ ವಿವಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ.
ಪದವಿ, ಸ್ನಾತಕೋತ್ತರ ಮತ್ತು ಬಿಪಿಎಡ್ ಒಟ್ಟು 11 ಪ್ರಥಮ ರ್ಯಾಂಕ್, ಪದವಿ ಹಾಗೂ ಬಿಪಿಎಡ್ ವಿಭಾಗದಲ್ಲಿ 4 ದ್ವಿತೀಯ ರ್ಯಾಂಕ್, 5 ತೃತೀಯ ರ್ಯಾಂಕ್, 1 ಚತುರ್ಥ ರ್ಯಾಂಕ್, ಪದವಿ ಹಾಗೂ ಬಿ.ಎಡ್‌ನಲ್ಲಿ ಎರಡು ೬ನೇ ರ್ಯಾಂಕ್, ಪದವಿ ಎರಡು ೮ನೇ ರ್ಯಾಂಕ್, ಒಂದು ೧೦ನೇ ರ್ಯಾಂಕ್ ಗಳಿಸಿದೆ.
0 Comments