ಮೂಡುಬಿದಿರೆ: ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿರಾಜ ಕಾಲೋನಿ, ಪುಚ್ಚಮೊಗರು ಇದರ ಶಾಲಾ ರಜತ ಮಹೋತ್ಸವವು ಇಂದು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಉಮಾನಾಥ ಕೋಟ್ಯಾನ್, ವಿದ್ಯಾರ್ಥಿಗಳ ಏಳಿಗೆಯನ್ನು ಕತ್ತಲೆಯಿಂದ ಬೆಳಕಿನಡೆಗೆ ತಂದು ಸಮಾಜಕ್ಕೆ ಪರಿಚಯ ಮಾಡುವ ಪ್ರಯತ್ನ ಕನ್ನಡ ಮಾಧ್ಯಮ ಶಾಲೆ ಮಾಡುತ್ತಿದೆ. ಆಂಗ್ಲ ಮಾಧ್ಯಮಕ್ಕೆ ಹೋಗುವುದರಿಂದ ಕನ್ನಡ ಮಾಧ್ಯಮ ಮುಚ್ಚುವ ಪರಿಸ್ಥಿತಿಗೆ ಬರುತ್ತದೆ. ಈ ಸಂದರ್ಭದಲ್ಲಿ ಶಾಲೆಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಊರಿನವರು ಹಾಗೂ ಹಳೆವಿದ್ಯಾರ್ಥಿಗಳು ಸೇರಿ ಮಾಡಬೇಕು ಎಂದು ತಿಳಿಸಿದ ಅವರು ರಂಗ ವೇದಿಕೆ ಹಾಗೂ ಹೊಸ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೇರವೆರಿಸಿದರು. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ತುಂಬಿ ತುಳುಕುವಂತೆ ಆಗಲಿ ಎಂದು ಆಶಿಸಿದರು.
ಮಾಜಿ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಆಂಗ್ಲ ಮಾಧ್ಯಮ ಶಾಲೆಯಿಂದ ಕನ್ನಡ ಮಾಧ್ಯಮ ಶಾಲೆಗಳು ನೆಲಕಚ್ಚಿ ಹೋಗಿವೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಾಗಿ ಆಂಗ್ಲಮಾಧ್ಯಮ ಶಾಲೆಯತ್ತ ವಾಲುತ್ತಿದ್ದಾರೆ. ಇದರಿಂದ ಶಿಕ್ಷಕರ ವರ್ಗವಣೆಯಾಗುತ್ತಿದೆ. ಸರಕಾರಿ ಶಾಲೆಗಳ ಸಂಬಳ ವ್ಯವಸ್ಥೆಯನ್ನು ಸರಕಾರ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕನ್ನಡ ಮಾಧ್ಯಮವನ್ನು ಉಳಿಸಿ ಇಂತಹ ಶಾಲೆಗಳಿಗೆ ಜೀವ ತುಂಬುವಂತಹ ಕೆಲಸ ಗ್ರಾಮಸ್ಥರಿಂದ ಆಗಬೇಕು. ಇಲ್ಲಿ ಬಹುತೇಕ ಕೃಷಿ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿಕೊಂಡರು.
ಉಗ್ಗಪ್ಪ ಪೂಜಾರಿಯವರ ರಜತಾಂಜಲಿ ಸ್ಮರಣ ಸಂಚಿಕೆಯನ್ನು ಲೋಕಪರ್ಣೆಗೊಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಕುಮಾರಿ ಮೇಘನ, ಸಾಹಿತಿ ಉಗ್ಗಪ್ಪ ಪೂಜಾರಿ, ನಮ್ಮ ಬೆದ್ರ ವಾರ ಪತ್ರಿಕೆಯ ಸಂಪಾದಕ ಅಶ್ರಫ್ ವಾಲ್ಪಾಡಿ, ಪಗ್ರತಿ ಪರ ಕೃಷಿಕ ಶ್ಯಾಮ್ ಭಟ್, ಶಾಲಾ ಹಳೇ ವಿದ್ಯಾರ್ಥಿ ರಾಜಾಕೃಷ್ಣ ಭಟ್, ರಾಷ್ಟçಮಟ್ಟದ ಕ್ರೀಡ ಸಾಧಕಿ ರಮ್ಯಶ್ರೀ ಜೈನ್, ಕಾಳಿಂಕ ಡಿಜಿಟಲ್ಸ್ ಮುಖ್ಯಸ್ಥೆ ಶಾಂತಲಾ ಆಚಾರ್ಯ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದ್ ಝೂಬಿ, ಮಾರೂರು ಖಂಡಿಗ ರಾಮದಾಸ ಅಸ್ರಣ್ಣರು, ಪುಚ್ಚಮೊಗರು ಮಸೀದಿಯ ಧರ್ಮಗುರು ಜನಾಬ್ ಮಹಮ್ಮದ್ ರಫೀಕ್ ಮದನಿ, ಕ್ಷೇತ್ರ ಶಿಕ್ಷಣ ಅಧಿಕಾರಿ ದೇವರಾಜು, ಎಪಿಎಂಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ಧನಲಕ್ಷ್ಮ ಕ್ಯಾಶ್ಯೂ ಇಂಡಸ್ಟ್ರೀಸ್ ಶ್ರೀಪತಿ ಭಟ್, ಎಸ್.ಕೆ.ಎಫ್ ಮುಖ್ಯಕಾರ್ಯ ನಿರ್ವಹಣ ಅಧಿಕಾರಿ ಸುಮನ್ ಮುರ್ಖಜಿ, ಹೊಸಬೆಟ್ಟು ಗ್ರಾ.ಪಂ. ಉಪಾಧ್ಯಾಕ್ಷ ರೆಕ್ಸನ್ ಪಿಂಟೋ, ರಜತ ಮಹೋತ್ಸವದ ಆಚರಣಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಆಳ್ವ, ರಾಷ್ಟçಪ್ರಶಸ್ತಿ ವಿಜೇತ ಹಾಗೂ ಶಿಕ್ಷಕ ರಮೇಶ್ ನಾಯಕ್ ರಾಯಿ, ಪಿ ಹನೀಫ್ ಪುಚ್ಚಮೊಗರು, ಸದಾಶಿವ ಪೂಜಾರಿ ಪುಚ್ಚಮೊಗರು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಯೋಗಿಶ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ, ಮುಖ್ಯ ಶಿಕ್ಷಕ ವಸಂತ ಕುಮಾರಿ, ಹಳೆ ವಿದ್ಯಾರ್ಥಿ ಸಂತೋಷ್ ಕೋಟ್ಯಾನ್ ಹಾಗೂ ಕುಮಾರ್ ಸುಶ್ರೀತ್ ಉಪಸ್ಥಿತರಿದ್ದರು.
ಶಿಕ್ಷಕ ಗಿರೀಶ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
0 Comments