"ದೇಶದಲ್ಲಿ ಅಸಹಿಷ್ಣತೆ ಆರಂಭವಾಗಿದ್ದೇ ಮುಸ್ಲಿಮರಿಂದ. ನೀವು ಬರೆದಿಟ್ಟುಕೊಳ್ಳಿ, ಒಂದು ವೇಳೆ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ಇಲ್ಲಿರುವ ಸಂವಿಧಾನ ಕಿತ್ತೋಗುತ್ತದೆ"... ಇದು ಮುಸ್ಲಮರಿಗೆ ಆರ್ಥಿಕ ಬಹಿಷ್ಕಾರ ಹಾಕಿರುವ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಡಿರುವ ಮಾತುಗಳು.
ಹಲವಾರು ಮಂದಿ ಮಾತೆತ್ತಿದರೆ ಅಂಬೆಡ್ಕರ್, ಸಂವಿಧಾನ ಎಂದೆಲ್ಲಾ ಹೇಳುತ್ತಾರೆ. ಅದೇ ಅಂಬೆಡ್ಕರ್ ಮುಸ್ಲಿಮರೆಲ್ಲರನ್ನೂ ಪಾಕಿಸ್ತಾನಕ್ಕೆ ಕಳಿಸಿ ಹಾಗೂ ಅಲ್ಲಿರುವ ಹಿಂದೂಗಳನ್ನು ಭಾರತಕ್ಕೆ ಕರೆಸಿಕೊಳ್ಳಿ ಎಂದು ಹೇಳಿದ್ದರು. ಆದರೆ ಅಂದಿನ ಜಾತ್ಯಾತೀತೆಯ ಮುಖವಾಡ ಹಾಕಿಕೊಂಡಿದ್ದ ಕಾಂಗ್ರೆಸ್ಸಿಗೆ ಅರ್ಥ ಆಗಿರಲಿಲ್ಲ. ಇಂದು ಪಾಕಿಸ್ತಾನದಲ್ಲಿ ಹಿಂದೂಗಳು ಸರ್ವನಾಶವಾಗಿದ್ದರೆ, ಇತ್ತ ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯತರಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಒಂದು ವೇಳೆ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ಆ ದಿನವೇ ಇಲ್ಲಿ ಸಂವಿಧಾನಕ್ಕೆ ಬೆಲೆ ಇರುವುದಿಲ್ಲ. ಅಂದೇ ಸಂವಿಧಾನ ಕಿತ್ತು ಹೋಗುತ್ತದೆ. ನಂತರ ಅವರು ಅಂಬೇಡ್ಕರಿಗೂ ಗೌರವ ಕೊಡುವುದಿಲ್ಲ ಗಾಂಧಿಗೂ ಗೌರವ ಕೊಡುವುದಿಲ್ಲ. ಬುದ್ಧನನ್ನೇ ಬಿಡದವರು ಗಾಂಧಿಯನ್ನು ಬಿಡುವರೇ?" ಎಂದು ಸಿಟಿ ರವಿಯವರು ಪ್ರಶ್ನಿಸಿದರು.
0 Comments