ಮೂಡುಬಿದಿರೆ: ರೂ ೭ ಲಕ್ಷ ಮೊತ್ತದ ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೊಡಂಗಲ್ಲಿನ ಸಂತೋಷ್ ಕುಮಾರ್ ಎಂಬವರನ್ನು ಬೆಳ್ತಂಗಡಿ ಸಿವಿಲ್ ಕೋರ್ಟ್ ದೋಷ ಮುಕ್ತಗೊಳಿದೆ.
ಬೆಳ್ತಂಗಡಿ ಕಸಬ ಗ್ರಾಮದ ಸುಂದರ ಆಚಾರ್ಯ ಎಂಬವರಿAದ ಸಂತೋಷ್ ಕುಮಾರ್ ಸಾಲವಾಗಿ ಪಡೆದಿದ್ದ ರೂ ೭ ಲಕ್ಷ ಹಣವನ್ನು ಹಿಂತಿರುಗಿಸಲು ನೀಡಿದ್ದ ಚೆಕ್ ಬ್ಯಾಂಕ್‌ನಲ್ಲಿ ನಗದೀಕರಣವಾಗದೆ ಅಮಾನ್ಯಗೊಂಡಿದೆ ಎಂದು ಆರೋಪಿಸಿ ಬೆಳ್ತಂಗಡಿ ಸಿವಿಲ್ ಕೋರ್ಟ್ನಲ್ಲಿ ಸಂತೋಷ್ ಕುಮಾರ್ ವಿರುದ್ಧ ದೂರು ದಾಖಲಾಗಿತ್ತು. ಕೋರ್ಟ್ ವಿಚಾರಣೆ ವೇಳೆ ಆರೋಪಿ ಪರ ವಕೀಲರಾದ ಶರತ್ ಶೆಟ್ಟಿ ನನ್ನ ಕಕ್ಷಿದಾರ ಸಂತೋಷ್ ಕುಮಾರ್ ಅವರು ಸುಭಾಶ್ಚಂದ್ರ ಜೈನ್ ಜತೆ ವ್ಯವಹಾರ ಪಾಲುದಾರಿಕೆ ಹೊಂದಿದ್ದು ಭದ್ರತೆಗಾಗಿ ಸಂತೋಷ್ ಕುಮಾರ್ ಅವರಿಂದ ಮೂರು ಖಾಲಿ ಚೆಕ್ ಹಾಳೆಗಳನ್ನು ಪಡಕೊಂಡಿದ್ದರು. ಇವರಿಬ್ಬರ ಮಧ್ಯೆ ವ್ಯವಹಾರದಲ್ಲಿ ವೈಮನಸ್ಸು ಬಂದಾಗ ಸುಭಾಶ್ಚಂದ್ರ ಅವರು ಒಂದು ಖಾಲಿ ಚೆಕ್ ಹಾಳೆಯನ್ನು ದುರ್ಬಳಕೆ ಮಾಡಿಕೊಂಡು ಸುಂದರ ಆಚಾರ್ಯ ಮೂಲಕ ಬ್ಯಾಂಕ್‌ನಲ್ಲಿ ಚೆಕ್ ಅಮಾನ್ಯಗೊಳಿಸಿ ನಂತರ ಕೋರ್ಟ್ ಕೇಸು ದಾಖಲಿಸಿ ಅನ್ಯಾಯ ಮಾಡಿದ್ದಾರೆ ಎಂದಿದ್ದಾರೆ. ಎರಡೂ ಕಡೆಯ ವಾದ ಆಲಿಸಿದ ಕೋರ್ಟ್ ಚೆಕ್ ಅಮಾನ್ಯ ಪ್ರಕರಣದಲ್ಲಿ ಸಂತೋಷ್ ಕುಮಾರನ್ನು ದೋಷಮುಕ್ತಗೊಳಿಸಿ ತೀರ್ಪಿತ್ತಿದೆ.
0 Comments