ಸೇತುವೆ ಸಹಿತ ಕಿಂಡಿ ಆಣೆಕಟ್ಟಿಗೆ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ತಾಲೂಕು ಕ್ಷೇತ್ರವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಸಂಪರ್ಕ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸ  ಕಾರ್ಯಕ್ರಮವು ಬುಧವಾರಂದು  ನಡೆಯಿತು.

ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ,ಕೃಷಿಕರ ಬದುಕು ಹಸನಾಗಿಸುವುದು ಹಾಗೂ ಕೃಷಿಭೂಮಿಗೆ ಬೇಕಾದ ನೀರಾವರಿ ಸೌಲಭ್ಯ ಒದಗಿಸಿ ಅವರನ್ನು ಸಶಕ್ತರನ್ನಾಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಈ ಕಾರಣಕ್ಕಾಗಿಯೇ ಜನಪರವಾದ ಯೋಜನೆಗಳಿಗೆ ಆದ್ಯತೆ ನೀಡಿ ಶಾಶ್ವತ ಕಾಮಗಾರಿಗಳನ್ನು ರೂಪಿಸಲಾಗುತ್ತಿದೆ  ಎಂದರು.

ಪಶ್ಚಿಮ ವಾಹಿನಿ ಯೋಜನೆ ಅನ್ವಯ ಒಟ್ಟು ೩೪ .೨೩ಕೋಟಿ ಮೊತ್ತದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ೨೩ ಕಿಂಡಿ ಅಣೆಕಟ್ಟುಗಳನ್ನು ಸ್ಥಾಪಿಸಲು ಆದ್ದೇಶಿಸಿದ್ದು ಈ ಪೈಕಿ ಹತ್ತುಕೋಟಿಯ ಹದಿನೆಂಟು ಲಕ್ಷ ವೆಚ್ಚದಲ್ಲಿ ನಾಲ್ಕು ಕಡೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದರು. ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಿಲ್ಲ. ಸಮಸ್ತ ಸಮಾಜ ಬಾಂಧವರಿಗೆ ಒಳಿತಾಗುವ ಸದುದ್ದೇಶದಿಂದ ಸೇತುವೆ ಸಹಿತ ಅಣೆಕಟ್ಟು ರಚನೆಗೆ ಆದ್ಯತೆ ನೀಡಲಾಗಿದೆ. ಇದರಿಂದಾಗಿ ಕೃಷಿಕರ ಕೃಷಿ ಚಟುವಟಿಕೆಗಳಿಗೆ ಇನ್ನಷ್ಟು ಸಹಕಾರಿಯಾಗಲಿದೆ. ಈ ಭಾಗಗಳ ಕೃಷಿಭೂಮಿ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರಕಿದಂತಾಗುವುದು ಎಂದರು. ಕ್ಷೇತ್ರವ್ಯಾಪ್ತಿಯಲ್ಲಿ ಕೃಷಿಕರಿಗೆ ಊರವರಿಗೆ ಸಹಕಾರವಾಗಬೇಕೆಂಬ ಹಿನ್ನಲೆಯಲ್ಲಿ ಹೆಚ್ಚುವರಿ ೨೫ಕೋಟಿ ಅನುದಾನವನ್ನು ವಿಶೇಷವಾಗಿ ಅಪೇಕ್ಷಿಸಲಾಗಿದ್ದು , ಮುಖ್ಯಮಂತ್ರಿಗಳಿ ಂದ ಪೂರಕ ಸ್ಪಂದನೆ ದೊರಕಿದೆ ಎಂದು ತಿಳಿಸಿದರು.

ಶಿಲಾನ್ಯಾಸ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಪ್ಪಾಡಿ ಎಂಬಲ್ಲಿ ೪ .೨೩ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಇದೇ ಪಂಚಾಯತ್ ವ್ಯಾಪ್ತಿಯ ಅರ್ತಿಗುಂಡಿ ಎಂಬಲ್ಲಿ ೨ .೨೫ ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ಪ್ರದೇಶದಲ್ಲಿ ೧. ೭೧ ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ, ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಕೊಳಟಿಕಟ್ಟ ಎಂಬಲ್ಲಿ ೧. ೮೯ಕೋಟಿ

ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಸ್ಥಳೀಯ ಜನಪ್ರತಿನಿಧಿಗಳು, ಊರ ಪ್ರಮುಖರ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಚೌಟರ ಅರಮನೆಯ ಕುಲದೀಪ್ ಎಂ, ಡಾ.ಪದ್ಮನಾಭ ಉಡುಪ, ಜಿಲ್ಲಾ ಪಂಚಾಂತ್ ಮಾಜಿ ಸದಸ್ಯ ಸುಚರಿತ ಶೆಟ್ಟಿ,ಪುತ್ತಿಗೆ ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿತಾ ಜೆ ಸಾಲ್ಯಾನ್,  ವೇ.ಮೂ. ಅನಂತಕೃಷ್ಣ ಭಟ್, ಪ್ರದೀಪ್ ಶೆಟ್ಟಿ, ಅಶೋಕ್ ಕೋಡಿಪ್ಪಾಡಿ, ರಾಮಮೂರ್ತಿ ಉಡುಪ, ಸ್ಥಳೀಯ ಜನಪ್ರತಿನಿಧಿಗಳಾದ ಸಾರಿಕ,ಸೌಮ್ಯ, ಸುಮ ಭಟ್, ಅಶೋಕ್, ನಾಗವರ್ಮ ಜೈನ್, ನಾಗರಾಜ್ ಕರ್ಕೇರ, ಪಾಲಡ್ಕ ಪಂಚಾಯತ್ ಅಧ್ಯಕ್ಷ ದಿನೇಶ್ ಕೆ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಬಿಜೆಪಿ ಮುಖಂಡ ಕಿಶೋರ್,ಸಣ್ಣ ನೀರಾವರಿ ಇಲಾಖಾ ಇಂಜಿನಿಯರ್ ರಾಕೇಶ್, ಗುತ್ತಿಗೆದಾರ ಗೋಕುಲ್ ದಾಸ್ ಶೆಟ್ಟಿ ಸೇರಿದಂತೆ ಪಕ್ಷ ಪ್ರಮುಖರು ,ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.


Post a Comment

0 Comments