ಮೂ ಡುಬಿದಿರೆ: ಹಿರಿಯ ಸ್ವರ್ಣೋದ್ಯಮಿ, ಕಮಲ್ ಜ್ಯುವೆಲ್ಸ್ ಮಾಲಕ, ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪುತ್ತಿಗೆ ಮನೆ ಗೋಪಾಲ ಆಚಾರ್ಯ (೮೨) ಫೆ.೨೪ರಂದು ನಿಧನ ಹೊಂದಿದರು.ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.ಮೊದಲು ಸ್ವರ್ಣಶಿಲ್ಪದಲ್ಲಿ ತೊಡಗಿಸಿಕೊಂಡು, ಬಳಿಕ ಕಾರ್ ಮಾಲಕ-ಚಾಲಕರಾಗಿ ಮುಂಬೈಗೆ ಬಸ್ ಸೌಲಭ್ಯ ಇಲ್ಲದ ಕಾಲದಲ್ಲಿ ನಿರಂತರವೆಂಬಂತೆ ಮುಂಬೈಗೆ ಕಾರ್ ಸರ್ವಿಸ್ ಮಾಡುತ್ತಿದ್ದರು. ಬಳಿಕ ಅಣ್ಣನೊಂದಿಗೆ ಸೇರಿ ಎಂ. ಗಂಗಾಧರ ಆಚಾರ್ಯ ಆ್ಯಂಡ್ ಬ್ರದರ್ಸ್ ಜ್ಯುವೆಲ್ಲರ್ಸ್ ೧೯೮೦ ಬಳಿಕ ಕಮಲ್ ಜ್ಯುವೆಲ್ಸ್ ಸ್ಥಾಪಿಸಿ ಮುನ್ನಡೆಸಿದ್ದ ಅವರು ಚಿನ್ನಬೆಳ್ಳಿ ವರ್ತಕರ ಸಂಘದ ಮಾಜಿ ಕೋಶಾಧಿಕಾರಿಯಾಗಿದ್ದರು.
ಅಮರನಾಥ ಶೆಟ್ಟಿ, ವೀರಪ್ಪ ಮೊಯಿಲಿ ಅವರ ಸಮಕಾಲೀನರಾಗಿ, ಜಿಲ್ಲಾ /ಅಂತರ್ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್, ಶಾರ್ಟ್ ರೇಸ್, ಲಾಂಗ್ರೇಸ್, ಗುಂಡೆಸೆತ ಹೀಗೆ ಬಹುಬಗೆಯ ಆಟೋಟಗಳಲ್ಲಿ ಬಹುಮಾನಿತರಾಗಿದ್ದರು.
ಮೂಡುಬಿದಿರೆ ರೋಟರಿ ಕ್ಲಬ್ ಸದಸ್ಯರಾಗಿ, ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ವಿಶೇಷವಾಗಿ ಕ್ರಿಕೆಟ್ನಲ್ಲಿ ರೋಟರಿ ಜಿಲ್ಲಾ/ಅಂತರ್ ಜಿಲ್ಲಾ ಮಟ್ಟದಲ್ಲಿ ಪಾರಿತೋಷಕ ಗಳಿಸುವಲ್ಲಿ ಪ್ರಮುಖಪಾತ್ರವಹಿಸಿದ್ದರು.
ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸ್ಥಾಪಕ ಸದಸ್ಯರಾಗಿ ಇದುವರೆಗೂ (೫೮ ವರ್ಷ) ಸಕ್ರಿಯರಾಗಿದ್ದರು.
ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಎರಡು ಬಾರಿ (೮ ವರ್ಷ) ಸೇವೆ ಸಲ್ಲಿಸಿದ್ದು , ಗ್ರಾಮಕೂಡುವಳಿಕೆಗಳ ಸಂದರ್ಶನ, ಮನೆಗಳ ಸಹಿತ ಜನಗಣತಿ ದಾಖಲಾತಿ, ಕ್ಷೇತ್ರದ ಮುಂಭಾಗ, ದಕ್ಷಿಣ ಭಾಗದ ಸಭಾಂಗಣ ನಿರ್ಮಾಣ ಸಹಿತ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು.
ಚೌಟರ ಅರಮನೆ ಕುಲದೀಪ ಎಂ., ಡಾ. ಎಂ. ಮೋಹನ ಆಳ್ವ, ಎಪಿಎಂಸಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ಮೂಡುಬಿದಿರೆ ಗಣೇಶೋತ್ಸವ ಸಮಿತಿ ಅಧ್ಯಕ್ಷ , ಉದ್ಯಮಿ ಕೆ. ಶ್ರೀಪತಿ ಭಟ್, ಸಂಚಾಲಕ ರಾಜಾರಾಮ್ ನಾಗರಕಟ್ಟೆ, ಮೂಡುಬಿದಿರೆ ಜ್ಯುವೆಲ್ಲರ್ಸ್ ಎಸೋಸಿಯೇಶನ್ ಅಧ್ಯಕ್ಷ ರಾಮದಾಸ ಪೈ, ಶ್ರೀಧರ ಆಚಾರ್ಯ, ಕಾಂತಾವರ ದಿನೇಶ ಆಚಾರ್ಯ, ಉದ್ಯಮಿ `ಎಸ್ಕೆಎಫ್'ನ ಜಿ. ರಾಮಕೃಷ್ಣ ಆಚಾರ್, ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ, ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ ಉಳಿಯ, ಶಿವರಾಮ ಆಚಾರ್ಯ ಉಳಿಯ, ತಂತ್ರಿವರ್ಯ ಎನ್. ಕೇಶವ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ತಾಕೊಡೆ, ಎಂಸಿಎಸ್ ಬ್ಯಾಂಕ್ ನಿರ್ದೇಶಕರಾದ ಮನೋಜ್ ಶೆಟ್ಟಿ, ಎಂ. ಅಶೋಕ ಕಾಮತ್, ವಿವಿಧ ಸಂಘಟನೆಗಳ ಪ್ರಮುಖರು ಮೃತರ ಅಂತಿಮ ದರ್ಶನಗೈದು ಶ್ರದ್ಧಾಂಜಲಿ ಅರ್ಪಿಸಿದರು. ಮೃತರ ಗುರು ಬಂಗಬೆಟ್ಟು ಸೀತಾರಾಮ ಶೆಟ್ಟಿ ತಮ್ಮ ಸಂತಾಪ ಸೂಚಿಸಿದ್ದ
0 Comments