ಮೂಡುಬಿದಿರೆ : ಇಲ್ಲಿನ ರೋಟರಿ ಕ್ಲಬ್ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪಲ್ಸ್ ಪೋಲಿಯೊ ಅಭಿಯಾನ ನಡೆಯಿತು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಮಗುವಿಗೆ ಪೋಲಿಯೋ ಹನಿಯನ್ನು ಹಾಕುವ ಮೂಲಕ ಚಾಲನೆಯನ್ನು ನೀಡಿ ಶುಭ ಹಾರೈಸಿದರು.
ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ ಪಲ್ಸ್ ಪೋಲಿಯೋದ ಮಹತ್ವದ ಬಗ್ಗೆ ತಿಳಿಸಿ ಭಾರತದಲ್ಲಿ ಪೋಲಿಯೋ ಮುಕ್ತವಾಗಿದ್ದರೂ ಆಫ್ರಿಕಾದ ಒಂದು ಊರಿನಲ್ಲಿ ಇತ್ತೀಚೆಗೆ ಪೋಲಿಯೋ ಕಾಣಿಸಿಕೊಂಡಿರುವ ಬಗ್ಗೆ ಹೇಳಿದವರು ನಾವೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಪಲ್ಸ್ ಪೋಲಿಯೋದ ಜಿಲ್ಲಾ ಅಧ್ಯಕ್ಷ ಡಾ.ರಮೇಶ್, ರೋಟರಿಕ್ಲಬ್ ಅಧ್ಯಕ್ಷ ಜೆ.ಡಬ್ಲ್ಯೂ ಪಿಂಟೋ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಎಂ.ಬಾಹುಬಲಿ ಪ್ರಸಾದ್, ಮಕ್ಕಳ ತಜ್ಞರಾದ ಡಾ.ಮುರಳೀಕೃಷ್ಣ, ಡಾ.ವಸಂತ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತಮ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ, ರೋಟರಿ ಕ್ಲಬ್ ನ ಸದಸ್ಯರಾದ ಸಿ.ಹೆಚ್ .ಗಫೂರ, ರವಿಪ್ರಸಾದ್ ಉಪಾಧ್ಯಾಯ, ಕೆ.ಆರ್.ಪಂಡಿತ್,ಸುರೇಶ್ ಜೈನ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಅಖಿಲಾ, ಹಿರಿಯ ದಂತ ವೈದ್ಯಾಧಿಕಾರಿ ನೆಫಿಸಾ, ಅಂಗನವಾಡಿ ಕಾರ್ಯಕರ್ತೆಯರಾದ ಜಯಂತಿ, ಪ್ರಿಯದರ್ಶಿನಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments