ಪದೋನ್ನತಿ ಹೊಂದಿದ ಗ್ರಾಮಕರಣಿಕ ಗೋಪಾಲ ಅವರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಳೆದ ಆರೂವರೆ ವರ್ಷಗಳಿಂದ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿ ಇದೀಗ ಕಂದಾಯ ನಿರೀಕ್ಷಕನಾಗಿ ಪದೋನ್ನತಿ ಹೊಂದಿ ಪುತ್ತೂರಿಗೆ ವರ್ಗಾವಣೆಗೊಂಡಿರುವ ಗೋಪಾಲ್ ಕೆ.ಟಿ.ಅವರನ್ನು ಪುತ್ತಿಗೆ ಪಂಚಾಯತ್ ವತಿಯಿಂದ ದಂಪತಿ ಸಹಿತ ಸನ್ಮಾನಿಸಿ ಗೌರವಿಸಲಾಯಿತು.

 ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಗೋಪಾಲ್ ಅವರು, ಪುತ್ತಿಗೆ ಮತ್ತು ದರೆಗುಡ್ಡೆ ಪಂಚಾಯತ್ ವ್ಯಾಪ್ತಿಯ ಜನರು  ಸಹಕಾರ ನೀಡಿರುವುದರಿಂದ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಯಿತು. ತನ್ನ ಅವಧಿಯಲ್ಲಿ ಪ್ರತ್ಯೇಕವಾಗಿ ಗ್ರಾಮಕರಣಿಕರ ಕಛೇರಿಯ ಕಟ್ಟಡವನ್ನು ಮಾಡಿರುವುದಕ್ಕೆ ಸಂತಸವಿದೆ ಎಂದು ಹೇಳಿದರು.

 ತನಗೆ ಸಹಾಯಕನಾಗಿ ಸಹಕಾರ ನೀಡುತ್ತಿದ್ದ ಸಹೋದ್ಯೋಗಿ ಕಿಶೋರ್ ಅವರನ್ನು ಗೋಪಾಲ್ ಅವರು ಗೌರವಿಸಿದರು.

ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಡಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಉಪಾಧ್ಯಕ್ಷೆ ತಾಹಿರಾಬಾನು ಮತ್ತು ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕಿ ಕಾತ್ಯಾಯಿನಿ, ಪ್ರಜ್ಞಾ ಸಲಹಾ ಕೇಂದ್ರದ ವಿಲಿಯಂ ಸ್ಯಾಮುವೆಲ್, ಸಂಶುದ್ದೀನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಿಡಿಒ ಸುನೀತಾ ಜಿ.ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿಬ್ಬಂದಿ ಸಂಜೀವ ವಂದಿಸಿದರು.

Post a Comment

0 Comments