ಮೂಡುಬಿದಿರೆ: ಸಮಗಾರಗುಂಡಿ ನಿವಾಸಿ, ರಾಷ್ಟ್ರಮಟ್ಟದ ವೇಟ್‌ಲಿಫ್ಟರ್ ಮೂಡುಬಿದಿರೆ ಕೃಷ್ಣ ಸುವರ್ಣ (70) ಮಂಗಳವಾರ ನಿಧನ ಹೊಂದಿದರು. ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ.
ಮಂಗಳೂರಿನ ಬಾಲಾಂಜನೇಯ ವ್ಯಾಯಾಮ ಶಾಲೆ, ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದ ಅವರು ಪವರ್ ಲಿಫ್ಟರ್, ಕುಸ್ತಿ ಪಟುವೂ ಆಗಿದ್ದರು. ಮಂಗಳೂರಿನ ತಾಜ್‌ಮಹಲ್ ಹೋಟೆಲ್‌ನಲ್ಲಿ ನೌಕರರಾಗಿದ್ದು ನಿವೃತ್ತಿ ಹೊಂದಿದ್ದರು. ಮೂಡುಬಿದಿರೆಯ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ಶ್ರೀ ನಾರಾಯಣ ಗುರು ಸೇವಾದಳ ಸಹಿತ ಹಲವಾರು ಸಂಘಟನೆಗಳಿಂದ ಅವರು ಸಮ್ಮಾನಿತರಾಗಿದ್ದರು.
0 Comments