ತೆಂಕಮಿಜಾರು ಪಂಚಾಯತ್ ನಲ್ಲಿ ಹಸಿರು ಸಂವಾದ ಕಾಯ೯ಕ್ರಮ

ತೆಂಕಮಿಜಾರು ಪಂಚಾಯತ್ ನಲ್ಲಿ ಹಸಿರು ಸಂವಾದ ಕಾಯ೯ಕ್ರಮ

ಮೂಡುಬಿದಿರೆ : ತೆಂಕ ಮಿಜಾರು ಗ್ರಾಮ ಪಂಚಾಯತ್ ನಲ್ಲಿ  ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಹಸಿರು ಸಂವಾದ ಕಾರ್ಯಕ್ರಮ ಶುಕ್ರವಾರ ನಡೆಯಿತು. 

  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಟ್ರಸ್ಟಿ ವಿವೇಕ್ ಆಳ್ವ  ಅವರು ಮಾತನಾಡಿ ತೆಂಕಮಿಜಾರು ಗ್ರಾಮವನ್ನು ಸ್ವಚ್ಛ ಗ್ರಾಮ ಮಾಡುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. 

 ಸಭೆಯಲ್ಲಿ ಸ್ವಚ್ಛ ಸರ್ವೇಕ್ಷಣ ಹಾಗೂ ಹಸಿರು ಸಂವಾದ ಮೊಬೈಲ್ ಆಪ್ ಬಗ್ಗೆ ಮಾಹಿತಿ ನೀಡಲಾಯಿತು.

 ಪಂಚಾಯತ್ ನ ಮಾಜಿ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್, ಸದಸ್ಯರು, ಅಂಗನವಾಡಿ,  ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಗುಂಪಿನ ಮಹಿಳಾ ಸದಸ್ಯರು, ದಿಶಾ ಸಂಸ್ಥೆ ಸದಸ್ಯರು, ಗ್ರಾಮದ ಹಿರಿಯರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿದ್ದರು. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಹಾಗೂ ಸಿಬ್ಬಂದಿಗಳು ಉಪಸ್ಥಿತ ರಿದ್ದರು.

Post a Comment

0 Comments

Advertisement