ಪವರ್ ಫ್ರೆಂಡ್ಸ್ ಬೆದ್ರದಿಂದ ಪ್ರದಶ೯ನಗೊಂಡ 'ರಾಯರುಲ್ಲೆರ್’ ಭಕ್ತಿ ಪ್ರಧಾನ ನಾಟಕ

ಪವರ್ ಫ್ರೆಂಡ್ಸ್ ಬೆದ್ರದಿಂದ ಪ್ರದಶ೯ನಗೊಂಡ 'ರಾಯರುಲ್ಲೆರ್’ ಭಕ್ತಿ ಪ್ರಧಾನ ನಾಟಕ

ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರದ ಸಹಯೋಗದಲ್ಲಿ  ಶನಿವಾರ  ಕನ್ನಡ ಭವನದಲ್ಲಿ ಪ್ರದರ್ಶನಗೊಂಡ ಭಕ್ತಿ ಪ್ರಧಾನ ತುಳು ಸಾಂಸಾರಿಕ ಹಾಸ್ಯಮಯ ನಾಟಕ ‘ರಾಯರುಲ್ಲೆರ್’ ಪ್ರೇಕ್ಷಕರ ಗಮನ ಸೆಳೆಯಿತು.

ಉದ್ಯಮಿ ಸಂಪತ್ ಸುವರ್ಣ ನಾಟಕವನ್ನು ಉದ್ಘಾಟಿಸಿ ಶುಭ  ಹಾರೈಸಿದರು. 

ರಾಜೇಶ್ ಕಡಲಕೆರೆ, ಕುಮಾರ್ ಪೂಜಾರಿ, ಸಿನಿಮಾ ನಿರ್ಮಾಪಕ  ಉದಯಕಾಂತ್, ನಟ ಸುರೇಶ್ ಅಂಚನ್, ಸಮರ್ಥ್ ಬಿಲ್ಡರ್ಸ್‌ನ ಸಂದೀಪ್ ಶೆಟ್ಟಿ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚಲನಚಿತ್ರ ನಟ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ ಕಾರ್ಕಳದ ‘ತೆಲಿಕೆದ ತೆನಾಲಿ’ ತಂಡ ಈ ನಾಟಕವನ್ನು ಪ್ರದರ್ಶಿಸಿತು.

ನಾಟಕ ಸಂಪೂರ್ಣ ಹೌಸ್‌ಫುಲ್ ಆಗಿದ್ದು, ಸುಮಾರು 500ಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಸ್ಥಳಾವಕಾಶದ ಕೊರತೆಯಿಂದ ನಾಟಕ ವೀಕ್ಷಿಸಲು ಸಾಧ್ಯವಾಗದೆ ಹಿಂದಿರುಗಿದರು. ನಾಟಕದ ಪ್ರದರ್ಶನ ಅತ್ಯುತ್ತಮವಾಗಿ ಮೂಡಿಬಂದಿತು.

Post a Comment

0 Comments

Advertisement