ಮೂಡುಬಿದಿರೆ : ತ್ರಿಭುವನ್ ಆಟೋಮೊಟಿವ್ ಸ್ಪೋಟ್ಸ್೯ ಕ್ಲಬ್, ಇಂಡಿಯನ್ ಮೋಟಾರ್ ಸ್ಪೋಟ್ಸ್ ೯ ಕ್ಲಬ್ ಹಾಗೂ ನಮ್ಮ ಮೂಡುಬಿದಿರೆ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ಮಾರ್ಗದರ್ಶನದಲ್ಲಿ ಮೂಡುಬಿದಿರೆ ಅಡ್ವೆಂಚರ್ ಡ್ರೈವ್ 2026ರ 5ನೇ ಆವೃತ್ತಿಯ ಟೈಮ್ ಸ್ಪೀಡ್ ಡಿಸ್ಟೆನ್ಸ್ ಕಾರು ರ‍್ಯಾಲಿಯು ಶನಿವಾರ ಸಂಜೆ ಶ್ರೀ ಮಹಾವೀರ ಕಾಲೇಜು ಕ್ಯಾಂಪಸ್‌ನಲ್ಲಿ ಆರಂಭಗೊಂಡಿತು.
ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ ಯುವಜನತೆ ಈ ರ‍್ಯಾಲಿಯಲ್ಲಿ ಉತ್ಸಾಹದಿಂದ ಭಾಗವಹಿಸಿ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಮತ್ತು ಈ ರ‍್ಯಾಲಿಯನ್ನು ಆನಂದಿಸಿ ಎಂದು ಹೇಳಿದರು.
ಇಂಡಿಯನ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಅಶ್ವಿನ್ ನಾಯಕ್ ರ‍್ಯಾಲಿಯ ವೇಳೆ ಪಾಲಿಸಬೇಕಾದ ಮಾನದಂಡಗಳ ಕುರಿತು ಮಾಹಿತಿ ನೀಡಿದರು.
ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ಇದರ ವೀಕ್ಷಕ ಲ್ಯಾನ್ಸಿ ಸಲ್ಡಾನ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., . ಆಯೋಜನಾ ಸಮಿತಿಯ ಅಧ್ಯಕ್ಷ ಅಕ್ಷಯ್ ಜೈನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ರ‍್ಯಾಲಿಯು ಎಕ್ಸ್ಪರ್ಟ್, ನವೀಸ್, ಡಾಕ್ಟರ್ಸ್, ಸ್ಟೂಡೆಂಟ್ಸ್, ಲೇಡೀಸ್, ಕಪಲ್ಸ್, ಕಾರ್ಪೊರೇಟ್, ಬೆದ್ರ ಲೋಕಲ್, ಕ್ಲಬ್ ಹಾಗೂ ಮೂಡುಬಿದಿರೆ ರ‍್ಯಾಲಿ ಸ್ಟಾರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಿತು.
ತಮಿಳುನಾಡು, ಕೇರಳ, ಮುಂಬೈ, ಚಿಕ್ಕಮಗಳೂರು, ಮಡಿಕೇರಿ, ಬೆಂಗಳೂರು ಮತ್ತಿತರ ಕಡೆಗಳ ರ‍್ಯಾಲಿ ಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
--------------------------
ರ‍್ಯಾಲಿಯಲ್ಲಿ ಭಾಗವಹಿಸಿದ್ದ ವಾಹಗಳ ಮೇಲೆ ರಸ್ತೆ ಸಂಚಾರ ನಿಯಮ ಪಾಲನೆ, ಸುರಕ್ಷಿತ ವಾಹನ ಚಾಲನೆ ಹಾಗೂ ಜವಾಬ್ದಾರಿಯುತ ರಸ್ತೆ ಬಳಕೆಯ ಮಹತ್ವವನ್ನು ಸಾರುವ, "ನಮ್ಮ ಮೂಡುಬಿದಿರೆ – ಸ್ವಚ್ಛ ಮೂಡುಬಿದಿರೆ" ಅಭಿಯಾನದ ಮೂಲಕ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ, ಸಾವ೯ಜನಿಕ ಸ್ಥಳಗಳಲ್ಲಿ ಕಸ ಎಸೆಯದೆ ನಗರವನ್ನು ಸ್ವಚ್ಛವಾಗಿಡುವ ಸಂದೇಶವನ್ನು ಸಾರುವ ಸ್ಟಿಕ್ಕರ್ ಗಳನ್ನು ಅಳವಡಿಸುವ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗಿತ್ತು.
------------------------

0 Comments