ಬ್ರಹ್ಮಾವರ ತಾಲೂಕಿನ ಬನ್ನಾಡಿ ಗ್ರಾಮದ ನಂದನ್ ಪೂಜಾರಿ ಎಂಬ ಯುವಕ ಅಪಘಾತಕ್ಕೀಡಾಗಿ ಮೃತಪಟ್ಟ ಹಿನ್ನಲೆಯಲ್ಲಿ ನಂದನ್ ಪೂಜಾರಿ ಮನೆಗೆ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ತೆರಳಿ ಆತನ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ತಿಳಿಸಿದರು.
ನಂದನ್ ಅವರ ತಂದೆ ತನ್ನ ಕಣ್ಣೆದುರಲ್ಲೇ ಅಪಘಾತ ನಡೆದಿದ್ದರೂ ಕೂಡಲೇ ಅಪಘಾತ ಮಾಡಿದ ತಪ್ಪಿತಸ್ಥ ವಾಹನವನ್ನು ಗುರುತಿಸಿ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ದೂರು ದಾಖಲಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಂಸದ ಕೋಟ ಹಾಗೂ ಶಾಸಕ ಕೊಡ್ಗಿಯವರು ಸ್ಥಳದಲ್ಲೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಹಾಗೂ ದೂರು ಸ್ವೀಕರಿಸಲು ವಿಳಂಬ ಮಾಡುವವರ ಮೇಲೂ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಅಪಘಾತ ಮಾಡಿದ ವಾಹನವನ್ನು ಪತ್ತೆಹಚ್ಚಿ ಮೃತನ ಕುಟುಂಬಕ್ಕೆ ವಿಮಾ ಪರಿಹಾರ ನೀಡುವಲ್ಲಿ ಪ್ರಕರಣ ದಾಖಲಿಸಿ ಎಂದೂ ಸಂಸದರು ಒತ್ತಾಯಿಸಿದರು.
ಸಂಸದರು ಹಾಗೂ ಶಾಸಕರ ಮಾತಿಗೆ ಸಹಮತ ವ್ಯಕ್ತಪಡಿಸಿದ ಎಸ್.ಪಿ. ಹರಿರಾಮ್ ಶಂಕರ್ ರವರು ತಕ್ಷಣ ವಾಹನವನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ ಹಾಗೂ ಸಂತ್ರಸ್ತರ ಕುಟುಂಬಕ್ಕೆ ವಿಮಾ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಶೆಟ್ಟಿ ಮತ್ತು ಕೋಟಿ ಪೂಜಾರಿ
ಸ್ಥಳೀಯರಾದ ಅಜಿತ್ ಶೆಟ್ಟಿ, ಪ್ರದೀಪ್, ಕೃಷ್ಣ ಪೂಜಾರಿ, ರಾಘವೇಂದ್ರ ಮರಕಾಲ, ಅಣ್ಣಪ್ಪ, ಗುಲ್ಲ ಪೂಜಾರಿ.


0 Comments