ಮೂಡಬಿದ್ರೆ ಪ್ರೇರಣಾ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment
ಮೂಡಬಿದ್ರೆ ಪ್ರೇರಣಾ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ
     ಮೂಡುಬಿದಿರೆ : ಕಡಲಕೆರೆ ಬಳಿ ಇರುವ ಪ್ರೇರಣಾ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ 2026 - 27 ನೆಯ ಸಾಲಿನ ಯಕ್ಷಶಿಕ್ಷಣ ತರಗತಿಯನ್ನು ಅಲಂಗಾರಿನ ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಅವರು ಉದ್ಘಾಟಿಸಿದರು . 
" ಬಾಲ್ಯದಲ್ಲಿ ನಮಗಿಲ್ಲದ ಅವಕಾಶ ಎಳೆಯ ಮಕ್ಕಳಾದ ನಿಮಗೆ ಒದಗಿ ಬಂದಿರುವುದು ಸುವರ್ಣಾವಕಾಶ. ಪುರಾಣದಲ್ಲಿ ಬರುವ ಕತೆಗಳನ್ನು ನಾವು ಅರಿತರೆ ಸುಸಂಸ್ಕೃತ ರಾಗುತ್ತೇವೆ " ಎಂದರು.
 ಯಕ್ಷಶಿಕ್ಷಣದ ಮೂಡುಬಿದಿರೆ - ಕಾರ್ಕಳ ವಲಯದ ಸಂಚಾಲಕರಾದ ಮಹಾವೀರ ಪಾಂಡಿ ಅವರು ಮಾತನಾಡಿ 
 " ವಿದ್ಯಾರ್ಥಿಗಳಿಗೆ ಯಕ್ಷಗಾನದ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಶ್ರಮಿಸುತ್ತಿದೆ . 102 ಶಾಲೆಗಳಲ್ಲಿ ಸುಮಾರು 7500 ವಿದ್ಯಾರ್ಥಿಗಳು 70 ಯಕ್ಷಗುರುಗಳ ತೊಡಗಿಸುವಿಕೆಯ ಮೂಲಕ ಯಕ್ಷಶಿಕ್ಷಣವು ಯಶಸ್ವಿಯಾಗುತ್ತಿದೆ " ಎಂದು ಹೇಳಿದರು.
 ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಎಂ. ಶಾಂತಾರಾಮ ಕುಡ್ವ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
 
 ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಸಂಚಾಲಕ ಲಾಡಿ ರವಿಪ್ರಸಾದ್ ಶೆಟ್ಟಿ , ಜತೆ ಕಾರ್ಯದರ್ಶಿ ನೆಲ್ಲಿಮಾರ್ ಸದಾಶಿವ ಭಟ್ ಸಂದರ್ಭೋಚಿವಾಗಿ ಮಾತನಾಡಿದರು. 

ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ , ಕಾರ್ಯದರ್ಶಿ ಅರುಣ್ ಕುಮಾರ್ , ಸೇವಾಂಜಲಿ 
ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಎಸ್.ಎನ್ . ಬೋರ್ಕರ್ , ಯಕ್ಷ ಶಿಕ್ಷಕ ಪ್ರಥ್ವೀಶ್ ಪರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು . 
ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅತಿಥಿಗಳನ್ನು ಸ್ವಾಗತಿಸಿದರು . ಶಿಕ್ಷಕಿ ಗ್ರೀಷ್ಮಾ
 ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ಪ್ರಿಯಾ ವಂದನಾರ್ಪಣೆ ಗೈದರು .

Post a Comment

0 Comments