ಬನ್ನಡ್ಕದಲ್ಲಿ ಸವೀ೯ಸ್ ರಸ್ತೆ ನಿಮಾ೯ಣ ಸದ್ಯಕ್ಕಿಲ್ಲ

ಜಾಹೀರಾತು/Advertisment
ಜಾಹೀರಾತು/Advertisment
ಬನ್ನಡ್ಕದಲ್ಲಿ ಸವೀ೯ಸ್ ರಸ್ತೆ ನಿಮಾ೯ಣ ಸದ್ಯಕ್ಕಿಲ್ಲ  
ಮೂಡುಬಿದಿರೆ : ಹಲವಾರು ರಸ್ತೆ ಅಪಘಾತಗಳಾಗಿ ಜೀವಹಾನಿಗಳಾಗಿ ಅಪಘಾತ ವಲಯವೆಂದೇ ಗುರುತಿಸಿಕೊಂಡಿರುವ ಮಂಗಳೂರು-ಕಾಕ೯ಳ ರಾಷ್ಟ್ರೀಯ ಹೆದ್ದಾರಿ 169ರ ಮೂಡುಬಿದಿರೆ ತಾಲೂಕಿನ ಬನ್ನಡ್ಕ ಪ್ರದೇಶದಲ್ಲಿ ಸವೀ೯ಸ್ ರಸ್ತೆಯ ನಿಮಾ೯ಣ ಸದ್ಯಕ್ಕಿಲ್ಲವೆಂದು ರಾ. ಹೆದ್ದಾರಿಯ ಯೋಜನಾ ನಿದೇ೯ಶಕರು ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಪಡುಮಾನಾ೯ಡು ಗ್ರಾ. ಪಂ. ವ್ಯಾಪ್ತಿಯ ಅಮನೊಟ್ಟು ಕ್ರಾಸ್ ನಿಂದ ಕೆಸರ್ ಗದ್ದೆವರೆಗೆ ಸವೀ೯ಸ್ ರಸ್ತೆಯ ಅಗತ್ಯವಿದೆಯೆಂದು ಗ್ರಾಮಸ್ಥರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ಮನವಿ ಸಲ್ಲಿಸಿದ್ದರು.

ಸಂಸದ ಚೌಟ ಅವರು ಬನ್ನಡ್ಕ ಪ್ರದೇಶದಲ್ಲಿ ಅಪೂಣ೯ವಾಗಿರುವ ಸವೀ೯ಸ್ ರಸ್ತೆ ನಿಮಾ೯ಣ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮೇ. 16 ರಂದು ಪತ್ರ ಬರೆದು ವಿನಂತಿಸಿದ್ದರು. ಮನವಿಯು ಇಲಾಖೆಯ ಅಧಿಕಾರಿಗಳ ಕೈ ಸೇರಿದೆ. ಸವೀ೯ಸ್ ರಸ್ತೆಯ ಬಗ್ಗೆ ಹಿಂದೆ ಡಿಪಿಆರ್ ನಲ್ಲಿ ಉಲ್ಲೇಖವಿರಲಿಲ್ಲ ಆದ್ದರಿಂದ ಇನ್ನು ಮುಂದೆ ರೀಸವೆ೯ ಮಾಡಿ ಜಾಗ ಎಕ್ವೇರ್ ಮಾಡಿದ ನಂತರ ಅನುಮೋದನೆಯಾಗಿ ಬಂದು ಮುಂದಿನ ಪ್ರಕ್ರಿಯೆಯಾಗಿ ಬರಬೇಕಾಗಿದೆ. ಈ ಪ್ರಕ್ರಿಯೆಯಾಗಬೇಕಾದರೆ ಒಂದು ವರುಷವೂ ಕಳೆಯಬಹುದು ಎಂದು ಪಿಡಿ ತಿಳಿಸಿದ್ದಾರೆ.
  
ಸವೀ೯ಸ್ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಊರವರು ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಮೇ 31ರಂದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.
 ಈ ಹಿನ್ನೆಲೆಯಲ್ಲಿ ಬನ್ನಡ್ಕದಲ್ಲಿ ಸಾವ೯ಜನಿಕರ ಅಪೇಕ್ಷೆಗನುಗುಣವಾಗಿ ರಸ್ತೆ ಬದಿಗಳಲ್ಲಿರುವ ಜಾಗವನ್ನು ವಶಕ್ಕೆ ಪಡೆದುಕೊಂಡು ರಸ್ತೆ ಅಗಲೀಕರಣಗೊಳಿಸಲು ಜಾಗ ಸಮತಟ್ಟುಗೊಳಿಸುವ ಕಾಮಗಾರಿ ಶುಕ್ರವಾರ ಆರಂಭಿಸಿದ್ದಾರೆ.
----------------------
 ಸವೀ೯ಸ್ ರಸ್ತೆ ಕಾಮಗಾರಿಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬನ್ನಡ್ಕದಲ್ಲಿ ಸವೀ೯ಸ್ ರಸ್ತೆ ಬೇಕೆನ್ನುವುದು ಸ್ಥಳೀಯರ ಆಗ್ರಹ. ಈ ಬಗ್ಗೆ ಅವರು ಮನವಿಯನ್ನು ನೀಡಿದ್ದು ಅದನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಕೊಡಲಾಗಿದೆ.
 ಈಗ ಆರಂಭಗೊಂಡಿರುವ ಕಾಮಗಾರಿ ಅದು ಸವೀ೯ಸ್ ರಸ್ತೆಯ ಕಾಮಗಾರಿಯಲ್ಲ ರಸ್ತೆಯನ್ನು ಅಗಲೀಕರಣಗೊಳಿಸಲಾಗುತ್ತಿದೆ. ಸವೀ೯ಸ್ ರಸ್ತೆಗಾಗಿ 750 ಮೀ ರಸ್ತೆಯನ್ನು ಅನುಮೋದನೆಗಾಗಿ ಕಳುಹಿಸಲಾಗಿದೆ. ಈ ಬಗ್ಗೆ ಯೋಜನಾ ನಿದೇ೯ಶಕರಿಗೆ ತಿಳಿಸಲಾಗಿದೆ. ಅನುಮೋದನೆಯಾಗಿ ಬಂದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
----------------------

Post a Comment

0 Comments