ಮಂಗಳೂರು ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ * ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳ್ಳಲು ಕ್ರೀಡೆಗಳು ಸಹಕಾರಿ


ಜಾಹೀರಾತು/Advertisment
ಜಾಹೀರಾತು/Advertisment

 ಮಂಗಳೂರು ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ


* ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳ್ಳಲು ಕ್ರೀಡೆಗಳು ಸಹಕಾರಿ


ಮೂಡುಬಿದಿರೆ:  ಒತ್ತಡದ ಜೀವನದ ಮಧ್ಯೆ ನಮ್ಮ ಶಾರೀರಿಕ ಮತ್ತು  ಮಾನಸಿಕ ಆರೋಗ್ಯ ಸದೃಢಗೊಳ್ಳಲು ಕ್ರೀಡೆಗಳು ಸಹಕಾರಿ. ಇದಕ್ಕೆ ಉತ್ತಮ ವಾತಾವರಣವನ್ನು ಕಲ್ಪಿಸಿ  ಕ್ರೀಡಾಕೂಟ ನಡೆಯುತ್ತಿರುವುದು ಶ್ಲಾಘನೀಯ. ಐದು ವಿಭಾಗಗಳು ಒಟ್ಟಾಗಿ ಈ ಕ್ರೀಡಾಕೂಟವನ್ನು ಮೂಡುಬಿದಿರೆಯಲ್ಲಿ ಆಯೋಜಿಸಿರುವುದು ಸಂಘಟಿತ ಕಾರ್ಯಕ್ರಮಕ್ಕೆ ಮಾದರಿ ಎಂದು  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.

 ಅವರು ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟವನ್ನು  ಗುರುವಾರ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದರು. 

 ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ. ಕರಿಕಲನ್, ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಗಣಪತಿ, ಕಾರ್ಕಳ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು, ಉಡುಪಿ ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಡಿಎನ್, ದ ಕ ಜಿಲ್ಲಾ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರೋಹಿಣಿ, ಮಂಗಳೂರು ವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ತಾಂತ್ರಿಕ ಸಹಾಯಕಿ ರಾಜೇಶ್ವರಿ ಈರನಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಗಳೂರಿನ ಶಶಿಕಾಂತ್ ಸೋಮನಾಥ್ ವಿಭೂತೇ, ಕಾರ್ಕಳದ ಸತೀಶ್ ಎಂ, ಸಿದ್ದಾಪುರದ ಜೆಡಿ ದಿನೇಶ್, ಪುತ್ತೂರಿನ ಸುಬ್ಬಯ್ಯ ನಾಯ್ಕ್, ಮಂಗಳೂರಿನ ಶ್ರೀಧರ್ ಎಂ ತಗ್ಗಿನಮನೆ, ಕುಂದಾಪುರದ ಪ್ರಕಾಶ್ ಪೂಜಾರಿ, ಸುಳ್ಯದ ಪ್ರಶಾಂತ್ ಕುಮಾರ್ ಪೈ ಹಾಜರಿದ್ದರು. 


ಮೂಡುಬಿದಿರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.


ಕುದುರೆಮುಖ ಸಂರಕ್ಷಿತ ಅರಣ್ಯ ವಿಭಾಗ, ಕುಂದಾಪುರ ವಿಭಾಗ, ಮಂಗಳೂರು ವಿಭಾಗ ಹಾಗೂ ಸಾಮಾಜಿಕ ಅರಣ್ಯದ ಉಡುಪಿ ಮತ್ತು ಮಂಗಳೂರು ವಿಭಾಗಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

Post a Comment

0 Comments