ಪ್ರೇರಣಾ ಶಿಶುಮಂದಿರ , ಕಡಲಕೆರೆ , ಮೂಡುಬಿದಿರೆಯಲ್ಲಿ ಪುಣಾಣಿ ಶಿಶುಗಳಿಂದ " ಶ್ರೀಕೃಷ್ಣ ಲೀಲೋತ್ಸವ "

ಜಾಹೀರಾತು/Advertisment
ಜಾಹೀರಾತು/Advertisment

 ಪ್ರೇರಣಾ ಶಿಶುಮಂದಿರ , ಕಡಲಕೆರೆ , ಮೂಡುಬಿದಿರೆಯಲ್ಲಿ ಪುಣಾಣಿ ಶಿಶುಗಳಿಂದ 

" ಶ್ರೀಕೃಷ್ಣ ಲೀಲೋತ್ಸವ " 

          ಮೂಡುಬಿದಿರೆ  ಕಡಲೆಕೆರೆಯ , ಸೇವಾಂಜಲಿ ಎಜುಕೇಷನಲ್ ಟ್ರಸ್ಟ್ ನ ಪ್ರವರ್ತಿತ , ಪ್ರೇರಣಾ ಶಿಶುಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ " ಶ್ರೀಕೃಷ್ಣ ಲೀಲೋತ್ಸವ " ಜರುಗಿತು . ಸಿಂಚನಾ ಸೌಹಾರ್ದ ಸಹಕಾರಿಯ ಸಿ.ಇ.ಒ  ಶ್ರೀಮತಿ ಸಂಗೀತಾ ಪ್ರಭುರವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ,  

" ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಬೇಕಾದುದು ಪೋಷಕರ ಕರ್ತವ್ಯ . ಪೋಷಕರು ಧಾರ್ಮಿಕತೆಯನ್ನು ಪಾಲಿಸಿದರೆ , ಮಕ್ಕಳಿಗೂ ಈ ಕುರಿತಾದ ಆಸಕ್ತಿ , ಅಭಿಮಾನ ಬೆಳೆಯುತ್ತದೆಯಾದ ಕಾರಣ , ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವವಾದುದು . ಇಂತಹ ಸಂಸ್ಕಾರವನ್ನು ತಿಳಿಸುವ ಶ್ರೀಕೃಷ್ಣ ಲೀಲೋತ್ಸವ ಆಯೋಜನೆ ಅರ್ಥಪೂರ್ಣ " ಎಂದರು . ಸೇವಾಂಜಲಿಯ ಉಪಾಧ್ಯಕ್ಷರಾದ ಶ್ರೀ ಸೋಮನಾಥ ಕೋಟ್ಯಾನ್ ರು " ವಿದ್ಯೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನೂ ಕಲಿಸಿ ಕೊಡುವ ಶಿಕ್ಷಣ ಕೊಡುವುದು ಸೇವಾಂಜಲಿಯ ಉದ್ದೇಶ " ಎಂದರು . ಸಭಾಧ್ಯಕ್ಷತೆ ವಹಿಸಿದ ಸೇವಾಂಜಲಿಯ ಸಂಚಾಲಕರಾದ ಶ್ರೀ  ಎಂ.ಶಾಂತರಾಮ ಕುಡ್ವರು " ಶ್ರೀಕೃಷ್ಣ ಎಂದರೆ ಕಾಲ್ಪನಿಕ ವ್ಯಕ್ತಿ ಅಲ್ಲ . ಶ್ರೀಕೃಷ್ಣನ ಬಗ್ಗೆ ವೈಜ್ಞಾನಿಕ ಸಂಶೋಧನೆಯಾಗಿ ಶ್ರೀಕೃಷ್ಣನು ಹುಟ್ಟಿದ ದಿನಾಂಕ , ಸಾಧನೆ ಎಲ್ಲದಕ್ಕೂ ಸರಿಯಾದ ಸಾಕ್ಷಾಧಾರಗಳಿವೆ . ಶ್ರೀಕೃಷ್ಣನ ಬದುಕು ನಮಗೆಲ್ಲಾ ಆದರ್ಶವಾಗಬೇಕು " ಎಂದು ನುಡಿದರು . ಪ್ರೇರಣಾ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವತ್ಸಲಾ ರಾಜೇಶ್ ರವರು ಉಪಸ್ತಿತರಿದ್ದು ಪುಣಾಣಿಗಳಿಗೆ ಶುಭ ಹಾರೈಸಿದರು . ಶಿಶುಮಂದಿರದ ಎಲ್ಲಾ 45  ಪುಣಾಣಿಗಳೂ ಶ್ರೀಕೃಷ್ಣ , ರಾಧೆಯ ವೇಷದಲ್ಲಿ ಕಾಣಿಸಿಕೊಂಡು ರಂಜಿಸಿದರು  . ನಂತರ ಶ್ರೀಕೃಷ್ಣನ ಜೀವನದ ಘಟನೆಗಳನ್ನು ನೃತ್ಯದ ಮೂಲಕ ಅಭಿನಯಿಸಿ ಮೆಚ್ಚುಗೆ ಗಳಿಸಿದರು . ಶಿಶುಗಳ ಪೋಷಕರೂ ಅತ್ಯುತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು .

ಶಿಶುಮಂದಿರದ ಮಾತಾಜಿ ಶ್ರೀಮತಿ ಪುಷ್ಪಾ ಹೆಗ್ಡೆಯವರು ಕಾರ್ಯಕ್ರಮ ನಿರೂಪಿಸಿದರು . ಶ್ರೀಮತಿ ಸ್ವಾತೀಯವರು ಧನ್ಯವಾದ ಸಲ್ಲಿಸಿದರು . ಶಾಲಾ ಸಿಬ್ಬಂದಿಗಳಾದ ಶ್ರೀ ಸುಜಿತ್ ಹಾಗೂ ಶ್ರೀ  ನಾರಾಯಣರು ಸಹಕರಿಸಿದರು .

Post a Comment

0 Comments