ಜು. 27ರಂದು ಕೆಲ್ಲಪುತ್ತಿಗೆಯಲ್ಲಿ 10ನೇ ವಷ೯ದ ಕೆಸರ್ ಡೊಂಜಿ ದಿನ
ಮೂಡುಬಿದಿರೆ: ನಮನ ಯುವ ಬಾಂಧವೆರ್
ಮತ್ತು ಶ್ರೀ ಮಹಾದೇವಿ ಭಜನಾ ಮಂಡಳಿ ರಿ. ಕೆಲ್ಲಪುತ್ತಿಗೆ ಇವುಗಳ ಸಹಯೋಗದಲ್ಲಿ 10 ನೇ ವಷ೯ದ "ಕೆಸರ್‌ಡ್ ಒಂಜಿ ದಿನ" ಕಾರ್ಯಕ್ರಮವು ಜು. 27 ಭಾನುವಾರದಂದು ನಮ್ಮ ತೆಂಕಾಯಿಬೆಟ್ಟುವಿನ ಗದ್ದೆಯಲ್ಲಿ ನಡೆಯಲಿದೆ.
ಪುರುಷರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪಧೆ೯ಗಳು, ನೃತ್ಯ ಕಾಯ೯ಕ್ರಮಗಳು, ರಾತ್ರಿ ಸಭಾ ಕಾಯ೯ಕ್ರಮ, ಕಂಬಳದ ಕೋಣ ಪದವು ಕಾನಡ್ಕ ದೂಜನಿಗೆ ಸನ್ಮಾನ ನಂತರ ಗಣೇಶ್ ಬಿ. ಅಳಿಯೂರು ನಿದೇ೯ಶನದ ವಿದ್ಯಾ ಗಣಪತಿ ಕಲಾ ಪ್ರತಿಷ್ಠಾನ ಅಳಿಯೂರು ಕಲಾವಿದರಿಂದ "ಪುದರೆ ಇಜ್ಜಿ" ನಾಟಕ ಪ್ರದಶ೯ನಗೊಳ್ಳಲಿದೆ ಎಂದು ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
0 Comments