ಸಂಗೀತದ ಮೂಲಕ ಯುವ ಮನಸ್ಸುಗಳ ಮನಗೆದ್ದ ಬೆನ್ನಿ ದಯಾಳ್

ಜಾಹೀರಾತು/Advertisment
ಜಾಹೀರಾತು/Advertisment

 ಸಂಗೀತದ ಮೂಲಕ ಯುವ ಮನಸ್ಸುಗಳ ಮನಗೆದ್ದ ಬೆನ್ನಿ ದಯಾಳ್ 

ಮೂಡುಬಿದಿರೆ: ರ್ಯಾಶ್ ಮತ್ತು ರ್ಯಾಪ್ ಸಾಂಗ್ ಗಳನ್ನು ಹಾಡುವ ಮೂಲಕ ಯುವ ಸಮುದಾಯವನ್ನು ಸೆಳೆಯುತ್ತಾ ಬಂದಿರುವ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಬೆನ್ನಿ ದಯಾಳ ಅವರು ಆಳ್ವಾಸ್ ವಿರಾಸತ್ ನ ಎರಡನೇ ದಿನವಾದ ಶುಕ್ರವಾರದಂದು  ರಣಬೀರ್ ಕಪೂರ್ ನಟನೆಯ "ಬಕ್ತಮೀಸ್ ದಿಲ್ ",ಶಾರುಕ್ ಖಾನ್ ನಟನೆಯ 'ದಿಲ್' ಸಿನಿಮಾದ ' ಚೈಯ್ಯಂ ಚೈಯ್ಯಂ" ೧೯೮೨ ರಲ್ಲಿ ಮಿಥುನ್ ಚಕ್ರವರ್ತಿ ಹೆಜ್ಜೆ ಹಾಕಿದ 'ಡಿಸ್ಕೊ ಡ್ಯಾನ್ಸರ್' ಸಿನಿಮಾದ ರಿಮಿಕ್ಸ್ 'ಐ ಯಾಮೇ ಡಿಸ್ಕೋ ಡ್ಯಾನ್ಸರ್...' ಹಾಡಿದಾಗ ವಿದ್ಯಾರ್ಥಿಗಳು ಕೈ ಎತ್ತಿ ನಲಿದರು. ಅದೇ ಲಯವನ್ನು ಮುಂದುವರಿಸಿದ ಅವರು, 'ಯಾದ್ ಆರಾ ಹೇ...' ಉಲಿದಾಗ ಎಲ್ಲರೂ ನೆನಪುಗಳ ಲಯಕ್ಕೆ ಜಾರಿದರು. 'ಬಾತ್ ಬಾಕಿ ಹೇ...' ಸಾಲಿಗೆ 'ಹ್ಹಾ ಹ್ಹಾ ...' ಎಂದು ಪ್ರೇಕ್ಷಕರು ಸ್ವರ ಸೇರಿಸಿದರು. ನಂತರ ದೀರ್ಘ ಉಚ್ಛಾಶ್ವಾಸದ 'ಓಂ ಶಾಂತಿ ಓಂ..' ಮಾಧುರ್ಯ. ಜೊತೆಯಲ್ಲೇ 'ತೆರಿ ಉಮರ್ ಕೇ ನವ್ ಜವಾನೊ...' ಹಾಗೂ 'ಹೇ ಹಸೀನೋ... ವಿವಿಧ ಭಾಷೆಯಲ್ಲಿ ಹಲವಾರು ಹಾಡಿ ಯುವ ಸಮುದಾಯಕ್ಕೆ ಹತ್ತಿರವಾಗಿರುವ ಬೆನ್ನಿ"ಡ್ಯಾನ್ ಸಾಲಾ", ' ಚುಮ್ಮಾ ಚುಮ್ಮಾ ದೇ ದೇ" ಸಹಿತ ಹಲವಾರು ಜನಪ್ರಿಯ ಹಾಡುಗಳನ್ನು ಹಾಡುವ ಮೂಲಕ  ಯುವ ಸಮುದಾಯವನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

  

ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮರಾಠಿ ಸೇರಿದಂತೆ ೧೯ಕ್ಕೂ ಅಧಿಕ ಭಾಷೆಗಳಲ್ಲಿ ೩೫೦೦ ಹಾಡುಗಳನ್ನು ಹಾಡಿದ ಖ್ಯಾತ ಹಿನ್ನೆಲೆ ಗಾಯಕ ಬೆನ್ನಿ ದಯಾಲ್ ಅವರ ಬಾಲಿವುಡ್, ಪಂಜಾಬ್, ತಮಿಳು ಚಿತ್ರದ ಹಾಡುಗಳನ್ನು ಹಾಡಿ ಸಂತೋಷಗೊಳಿಸಿದರು.

'

ಬೆನ್ನಿ ದಯಾಳ್ ಅವರು ವಿರಾಸತ್ ನಲ್ಲಿ "ಗಾನ ವೈಭವ"ವನ್ನು ನಡೆಸಿ ಕೊಡಲು ವೇದಿಕೆಗೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು  ಶಿಳ್ಳೆ ಮತ್ತು ಚಪ್ಪಾಳೆಯ ಮೂಲಕ ಜೋಶ್ ತುಂಬಿದರು.

  ರ್ಯಾಪ್ ಸಾಂಗ್ ಗಳಿಗೆ ಹೆಜ್ಜೆ ಹಾಕುತ್ತಾ ಹಾಡಲು ಆರಂಭಿಸುತ್ತಿದ್ದಂತೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಾ ಬೊಬ್ಬೆ ಹಾಕುತ್ತಾ ಬೆನ್ನಿ ದಯಾಳ್ ಅವರನ್ನು ಇನ್ನಷ್ಟು ಹಾಡುಗಳನ್ನು ಹಾಡಲು ಹುರಿ ತುಂಬಿಸಿದರು. ಒಟ್ಟಾರೆಯಾಗಿ ಯುವ ಸಮುದಾಯವನ್ನು ತನ್ನತ್ತ ಸೆಳೆಯುವ ಕಲೆಯನ್ನು ಮೈಗೂಡಿಸಿಕೊಂಡಿರುವ ಬೆನ್ನಿ ದಯಾಳ್  ಗಾನ ವೈಭವವನ್ನು ಉತ್ತಮವಾಗಿ ಪ್ರಸ್ತುತಪಡಿಸಿದರು. 

 ಆಳ್ವಾಸ್ ನ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ವಿಭಾಗದ ಅನಂತಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

 ಎರಡನೇ ದಿನದ ಕಾರ್ಯಕ್ರಮವನ್ನು ಕ್ಯಾಪ್ಟನ್ ಬ್ರಿಜೇಶ್  ಚೌಟ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ವಿರಾಸತ್ ನ ರೂವಾರಿ ಡಾ.ಎಂ.ಮೋಹನ ಆಳ್ವ ಈ ಸಂದರ್ಭದಲ್ಲಿದ್ದರು.

Post a Comment

0 Comments