ಶ್ರೀ ವೀರ-ವಿಕ್ರಮ ಬಯಲು ಕಂಬಳ ಕರೆ ಮುಹೂರ್ತ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ವೀರ-ವಿಕ್ರಮ ಬಯಲು ಕಂಬಳ ಕರೆ ಮುಹೂರ್ತ


ಮೂಡುಬಿದಿರೆ: 2024ರ ಮಾಚ್೯ 16ರಂದು  ಹೊಕ್ಕಾಡಿಗೋಳಿ ಶ್ರೀ ಮಹಿಷಮರ್ದಿನ ಕಂಬಳ ಸಮಿತಿ ವತಿಯಿಂದ  ನಡೆಯುವ 

ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ಶ್ರೀ ವೀರ- ವಿಕ್ರಮ ಜೋಡುಕರೆ ಬಯಲು ಕಂಬಳ ಕರೆಯ ಮುಹೂರ್ತವನ್ನು ಪೂಂಜ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಕೃಷ್ಣ ಪ್ರಸಾದ್ ಆಸ್ರಣ್ಣರ ಅವರು ವೈಧಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.

  ಹೊಕ್ಕಾಡಿ ಗೋಳಿ ಕಂಬಳ ಸಮಿತಿಯ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ನೊಣಲ್ ಗುತ್ತು, ಗೌರವ ಅಧ್ಯಕ್ಷರಾದ ಸಂಜೀವ ಶೆಟ್ಟಿ ಗುಂಡ್ಯಾರು, ಪ್ರದಾನ ಕಾರ್ಯದರ್ಶಿ ಪ್ರಭಾಕರ್ ಎಚ್. ಹುಲಿಮೇರು ಕಾರ್ಯದರ್ಶಿ ಪುಷ್ಪರಾಜ್ ಜೈನ್, ಪೂಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಕಂಬಳ ಸಂಘಟಕರಾದ ಜಗತ್ಪಾಲ್ ಶೆಟ್ಟಿ ಉಮನೊಟ್ಟು ಕುಟ್ಟಿ ಶೆಟ್ಟಿ ಹಕ್ಕೇರಿ, ಆನಂದ್ ಶೆಟ್ಟಿ ಹಕ್ಕೇರಿ, ಸುರೇಶ್ ಕೆ. ಶೆಟ್ಟಿ ಹಕ್ಕೇರಿ, ಸಚಿನ್ ಶೆಟ್ಟಿ ಹಕ್ಕೇರಿ,ಜಯಂತ್ ಶೆಟ್ಟಿ ಹಕ್ಕೇರಿ, ಸಂತೋಷ್ ಶೆಟ್ಟಿ ಕೊನೆರೊಟ್ಟು ರಾಜೇಶ್ ಶೆಟ್ಟಿ ಸಿದ್ದಕಟ್ಟೆ ಸ್ಥಳ ದಾನಿಗಳಾದ ರಾಜು ಶೆಟ್ಟಿ ಮತ್ತು ಸಹೋದರರು ಹೊಕ್ಕಾಡಿಗೋಳಿ, ಸುಧೀರ್ ಶೆಟ್ಟಿ ಹೊಕ್ಕಾಡಿಗೋಳಿ, ಕೊಲ್ಯ ಬಾಬು ಶೆಟ್ಟಿ, ಪ್ರವೀಣ್ ಕುಲಾಲ್ ಮತ್ತು ಸಹೋದರರು ಹೊಕ್ಕಾಡಿಗೋಳಿ, ಹರೀಶ್ ಶೆಟ್ಟಿ ಹೊಕ್ಕಾಡಿಗೋಳಿ, ಮಹಾವೀರ್‌ಚೌಟ ಉಗ್ರಡಿ. ಸುಂದರ್ ಪೂಜಾರಿ ನಿಡ್ಯಾಲ, ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಯೋಗೀಶ್ ಆಚಾರ್ಯ, ಲಿಂಗಪ್ಪ ಪೂಜಾರಿ, ಮಹಾಬಲ ಶೆಟ್ಟಿ ಆರಂಬೋಡಿ ಗ್ರಾ.ಪಂ. ಸದಸ್ಯರಾದ ಸತೀಶ್ ಪಿ.ಮಠ, ಸುರೇಂದ್ರ ಶೆಟ್ಟಿ ಅಜ್ಜಾಡಿ, ಸುರೇಶ್ ಕುಲಾಲ್ ಮತ್ತಿತರರಿದ್ದರು.

Post a Comment

0 Comments