ಮೂಡುಬಿದಿರೆ ನಾಗರಕಟ್ಟೆ ಇದರ 53 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಸಂಕೀರ್ತನೆ
ಮೂಡುಬಿದಿರೆ: ಇಲ್ಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನಾಗರಕಟ್ಟೆ ಇದರ ವತಿಯಿಂದ 53 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಸಂಕೀರ್ತನೆ ಕಾರ್ಯಕ್ರಮವು ಡಿ.9ರಂದು ನಾಗರಕಟ್ಟೆ ಬಳಿಯ ಅಶ್ವತ್ಥಕಟ್ಟೆಯಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಕಟನೆ ತಿಳಿಸಿದೆ.
ಮೂಡುಬಿದಿರೆಯಲ್ಲಿ ಪ್ರಥಮ ಬಾರಿಗೆ ಶ್ರೀ ಚೌಡಯ್ಯ ದೇವಿ ಕೃಪಾ ಪೋಷಿತ ಯಕ್ಷಗಾನ ವತಿಯಿಂದ ಶ್ರೀ ಕ್ಷೇತ್ರ ಸಿಂಗದೂರು ಜಿ.ಆರ್.ಕಾಳಿಂಗ ನಾವಡ ವಿರಚಿತ 'ನಾಗಶ್ರೀ' ಕನ್ನಡ ಯಕ್ಷಗಾನ ಕಥಾ ಭಾಗವನ್ನು ರಾತ್ರಿ 9.30ರಿಂದ ಆಡಿ ತೋರಿಸಲಿದ್ದಾರೆ.
0 Comments