ಮೂಡುಬಿದಿರೆ: ಅಳಿಯೂರಿನ ಕೋಟಿ ಚೆನ್ನಯ ಯುವಶಕ್ತಿ ಮತ್ತು ಕೋಟಿ ಚೆನ್ನಯ ಮಹಿಳಾ ಘಟಕದ ದಶಮಾನೋತ್ಸವ ನಡೆಯಿತು

ಜಾಹೀರಾತು/Advertisment
ಜಾಹೀರಾತು/Advertisment

 ಅಳಿಯೂರು: ಕೋಟಿ ಚೆನ್ನಯ ಯುವಶಕ್ತಿ ಮತ್ತು ಕೋಟಿ ಚೆನ್ನಯ ಮಹಿಳಾ ಘಟಕದ ದಶಮಾನೋತ್ಸವ

ಶಾಸಕ ಕೋಟ್ಯಾನ್ ಗೆ ಸನ್ಮಾನ


ಮೂಡುಬಿದಿರೆ: ಅಳಿಯೂರಿನ ಕೋಟಿ ಚೆನ್ನಯ ಯುವಶಕ್ತಿ ಮತ್ತು ಕೋಟಿ ಚೆನ್ನಯ ಮಹಿಳಾ ಘಟಕದ ದಶಮಾನೋತ್ಸವ ನಡೆಯಿತು.



ಅಳಿಯೂರಿನ ಬಹುವರ್ಷಗಳ ಬೇಡಿಕೆಯಾಗಿದ್ದ ಪದವಿ ಪೂರ್ವ ಕಾಲೇಜನ್ನು ಮಂಜೂರುಗೊಳಿಸಿ ಜನಮೆಚ್ಚುಗೆ ಪಡೆದಿರುವ ಹಾಗೂ ನಿರಂತರ ಅಭಿವೃದ್ಧಿ ಚಟವಟಿಕೆಗಳನ್ನು ನಡೆಸುತ್ತಿರುವ ಶಾಸಕ ಉಮಾನಾಥ ಕೋಟ್ಯಾನ್‌ರನ್ನು ಯುವಶಕ್ತಿಯ ಅಧ್ಯಕ್ಷ ಉದಯ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.




ಹೇಮಾ ಸಭಾಭವನದ ಮಾಲಕರಾದ ಕೆ.ಕೆ. ಪೂಜಾರಿ, ಹೇಮಾ ಕೆ. ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ವಾಲ್ಪಾಡಿ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕುಮಾರ್, ಶಿರ್ತಾಡಿ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಪ್ರವೀಣ್ ಭಟ್, ತಾ.ಪಂ ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು.

ಕೋಟಿ ಚೆನ್ನಯ ಯುವಶಕ್ತಿಯ ಸ್ಥಾಪಕಾಧ್ಯಕ್ಷ ವಿಶ್ವನಾಥ್ ಕೋಟ್ಯಾನ್, ಗೌರವಾಧ್ಯಕ್ಷ ರಮಾನಂದ ಕೋಟ್ಯಾನ್, ಸಂಚಾಲಕ ಲಕ್ಷ್ಮಣ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಶುಭಕರ್, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments